ಶ್ರೀ ಮಹಾವೀರ ನಿರ್ವಾಣ ದಿನಾಚರಣೆ

New Mahaveer New
Published on

ಹುಬ್ಬಳ್ಳಿ : ಇಪ್ಪತ್ನಾಲ್ಕನೇ ತೀರ್ಥಂಕರ ಶ್ರೀ ಮಹಾವೀರರ ನಿರ್ವಾಣ ದಿನವನ್ನು ಜಿನಭಕ್ತರು ಶುಕ್ರವಾದಂದು ದೀಪಾವಳಿಯಾಗಿ ಆಚರಿಸಿದರು.

ಬೆಳಗ್ಗೆ ನಗರದ ಎಲ್ಲ ಜಿನಮಂದಿರಗಳಲ್ಲಿ ಭಗವಾನ್ ಶ್ರೀ ಮಹಾವೀರ ತೀರ್ಥಂಕರರಿಗೆ ವಿಶೇಷ ಪೂಜೆ ಸಲ್ಲಿಸಿ, 2,551ನೇ ನಿರ್ವಾಣ ದಿನ ಆಚರಿಸಿದರು. ಶ್ರಾವಕ, ಶ್ರಾವಕಿಯರ ಉಪಸ್ಥಿತಿಯಲ್ಲಿ ಜಿನಪ್ರತಿಮೆಗಳಿಗೆ ವಿಶೇಷ ಪಂಚಾಮೃತ ಅಭಿಷೇಕ, ಭಕ್ತಿ ಗಾಯನ, ಅಷ್ಟಕ, ನಿರ್ವಾಣ ದ್ಯೋತಕವಾಗಿ ಲಾಡು ಅರ್ಪಣೆ, ಆರತಿ, ಭಜನೆ ಮತ್ತಿತರ ಮಂಗಲ ಕಾರ್ಯಗಳು ನೆರವೇರಿದವು. ಜೈನ ಬೋರ್ಡಿಂಗ್ ಬಸದಿಯಲ್ಲಿ ಮುನಿಶ್ರೀ ಪುಣ್ಯಸಾಗರ ಮಹಾರಾಜರ ಸನ್ನಿಧಿಯಲ್ಲಿ ಭಕ್ತಿ ಕಾರ್ಯಕ್ರಮಗಳು ನಡೆದವು. ಶ್ರಾವಕ, ಶ್ರಾವಕಿಯರು ಪರಸ್ಪರ ಶುಭಾಷಯದೊಂದಿಗೆ ನೂತನ ಮಹಾವೀರ ಶಕೆಗೆ ಸ್ವಾಗತ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net