

ನಾಪೋಕ್ಲು: ಸಮೀಪದ ಪಾಲೂರು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತು.
ಏ.13ರಂದು ಮಹಾಲಿಂಗೇಶ್ವರ ದೇವರ ಮೂಲಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಏ.4ರಂದು ಗಣ ಹೋಮ ಮತ್ತು ಕೊಡಿಮರ ಏರಿಸುವುದು, ಬೆಳಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಉತ್ಸವ ಬಲಿ ನೆರವೇರಿ ಏ.16 ರಂದು ಉತ್ಸವ ಬಲಿ ಮತ್ತು ರಾತ್ರಿ ದೀಪಾರಾಧನೆ, ಏ.17ರಂದು ಹಗಲು ಉತ್ಸವ ಬಲಿ ನಡೆದು ಸಂಜೆ ದೀಪಾರಾಧನೆ ನಡೆಯಿತು.
ಏ.18ರಂದು ಆಯೋಜಿಸಿದ್ದ ಪಟ್ಟಣಿ ಹಬ್ಬ ಉತ್ಸವದ ಅಂಗವಾಗಿ ಬೆಳಗ್ಗೆ ತುಲಾ ಭಾರಸೇವೆ ಸೇರಿದಂತೆ ವಿವಿಧ ಹರಕೆ ಸೇವೆ ಕಾಣಿಕೆಗಳನ್ನು ಒಪ್ಪಿಸಿ ಮಧ್ಯಾಹ್ನ ಎತ್ತು ಪೋರಾಟ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಮಹಾಪೂಜೆ, ವಿಶೇಷ ಸೇವೆಗಳು ಜರುಗಿ ಮಹಾಮಂಗಳಾರತಿ ತೀರ್ಥ, ಪ್ರಸಾದ ವಿತರಣೆ ಮಾಡಲಾಯಿತು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಆ ನಂತರ ಜೋಡಿ ದೇವರ ನೃತ್ಯೋತ್ಸವ ಜರುಗಿತು. ದೇವಾಲಯದ ಮುಖ್ಯ ಅರ್ಚಕ ದೇವಿಪ್ರಸಾದ್, ತಂತ್ರಿಗಳಾಗಿ ಕೃಷ್ಣ, ಸತ್ಯಮೂರ್ತಿ ಸರಳಾಯ, ಕೃಷ್ಣಮೂರ್ತಿ ಇನ್ನಿತರರು ಧಾರ್ಮಿಕ ಪೂಜಾ ವಿಧಿ-ವಿಧಾನ ನೆರವೇರಿಸಿದರು.
ದೇವಾಲಯದ ಬಂಡಾರ ತಕ್ಕರಾದ ಎಡಕೇರಿ ಪ್ರವೀಣ್, ಸಮಿತಿ ಅಧ್ಯಕ್ಷರು ಪೊದವಾಡ ಸುಜೈ, ಕಾರ್ಯದರ್ಶಿ ಸೂಧನ ಮದನ್, ಹಾಗೂ ಸದಸ್ಯರು, ಪಾರುಪತ್ತೆಗಾರ ಟಿ.ಕೆ.ಮನು, ತಕ್ಕ ಮುಖ್ಯಸ್ಥರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿ ಸದಸ್ಯರು, ಪ್ರತಿನಿಧಿಗಳು , ಭಕ್ತರು ಪಾಲ್ಗೊಂಡಿದ್ದರು.