ಶ್ರೀ ಮಾಧವತೀರ್ಥರ ಮಧ್ಯಾರಾಧನೆ

swamy
ಕಂಪ್ಲಿ ಕೋಟೆಯ ತುಂಗಭದ್ರಾ ನದಿ ತಟದಲ್ಲಿನ ಮಾಧವತೀರ್ಥರ ಬೃಂದಾವನವನ್ನು ಮಧ್ಯಾರಾಧನೆ ನಿಮಿತ್ತ ಅಲಂಕರಿಸಲಾಗಿತ್ತು.
Published on

ಕಂಪ್ಲಿ: ಇಲ್ಲಿನ ಕೋಟೆ ತುಂಗಭದ್ರಾ ನದಿ ತಟದಲ್ಲಿ, ಮಂತ್ರಾಲಯ ಮಠದ ಪರಂಪರೆಯ ಯತಿಗಳಾದ ಶ್ರೀ ಮಾಧವತೀರ್ಥರ ಮಧ್ಯಾರಾಧನಾ ಸಮಾರಂಭ ಬುಧವಾರ ಶ್ರದ್ಧೆ-ಭಕ್ತಿಗಳಿಂದ ನಡೆಯಿತು.

ಶ್ರೀ ಮಾಧವತೀರ್ಥರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ, ನೈವೇದ್ಯ, ಹಸ್ತೋದಕ ಕಾರ್ಯಕ್ರಮಗಳು ಸಾಂಗೋಪಾಂಗವಾಗಿ ನಡೆದವು. ಬೆಂಗಳೂರಿನ ರಾಯರಮಠದ ಪಂಡಿತ್ ಶ್ರೀನಿಧಿ ಆಚಾರ್ ಶ್ರೀ ಮಾಧವತೀರ್ಥರ ಕುರಿತು ಉಪನ್ಯಾಸ ನೀಡಿ, 13ನೇ ಶತಮಾನದ ಗೋವಿಂದಶಾಸ್ತ್ರಿಗಳು ಮಧ್ವಾಚಾರ್ಯರ ನೇರ ಶಿಷ್ಯರಾಗಿ ಮಾಧವ ತೀರ್ಥರೆನಿಸಿಕೊಂಡರು. 17ವರ್ಷಗಳ ಕಾಲ ಸರ್ವಜ್ಞ ಪೀಠದಲ್ಲಿದ್ದು, ಇವರ ಕೃತಿಗಳು ಲಭ್ಯವಾಗಿಲ್ಲ.

ಅಕ್ಷೋಭ್ಯತೀರ್ಥರಿಗೆ ಸಂಸ್ಥಾನದ ಅಧಿಪತ್ಯ ಕೊಟ್ಟಿದ್ದಲ್ಲದೆ, ಮಧುಹರಿ ತೀರ್ಥರನ್ನು ಶಿಷ್ಯರನ್ನಾಗಿ ಸ್ವೀಕರಿಸಿ, ಆಚಾರ್ಯರಿಂದ ಪ್ರದತ್ತವಾಗಿದ್ದ ವೀರರಾಮನ ವಿಗ್ರಹವನ್ನು ದಯಪಾಲಿಸಿದರು. ಮಾಧವತೀರ್ಥರು 4 ವೇದಗಳನ್ನು ಅಧ್ಯಯನಮಾಡಿ ಕರತಲಾಮಲಕ ಮಾಡಿಕೊಂಡಿದ್ದರು. ಮಾಧವತೀರ್ಥರ ಸಂಕಲ್ಪಶಕ್ತಿಯಿಂದ ಹಂಪಿಯ ವಿಜಯನಗರ ಸಾಮ್ರಾಜ್ಯ ವೈಭವಕ್ಕೆ ಕಾರಣವಾಗಿತ್ತು ಎಂದರು.

ಕಂಪ್ಲಿ ರಾಘವೇಂದ್ರ ಶಾಖಾಮಠದ ವಿಚಾರಣಾಕರ್ತ ಟಿ.ಕೊಟ್ರೇಶ, ವ್ಯವಸ್ಥಾಪಕ ಪುರುಷೋತ್ತಮ, ಪುರೋಹಿತ ಕಿಶೋರಾಚಾರ್, ಗುರುರಾಜ ಸೇವಾಮಂಡಳಿಯ ಪ್ರಮುಖ ಡಿ.ಗುರುರಾಜಾಚಾರ್, ಸದ್ಭಕ್ತರಾದ ಕೋಟೆಯ ಡಾ.ಧೀರೇಂದ್ರ ವೈದ್ಯ, ಶೇಷಗಿರಿ ಆಚಾರ, ಜಗದೀಶ ಜಿ.ರಾಯ್ಕರ್, ದಿಗ್ಗಾವಿ ಗುರುರಾಜಾಚಾರ್, ದಿಗ್ಗಾವಿ ವೇಣುಗೋಪಾಲಾಚಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net