ಶ್ರೀ ಮದ್ದೇವಲ ಮಹರ್ಷಿ ಜಯಂತ್ಯುತ್ಸವ

12-KGL-2 (2)
ಪಟ್ಟಣದಲ್ಲಿ ಸೋಮವಾರ ಆಂಧ್ರ ದೇವಾಂಗದ ಕುಲ ಬಾಂಧವರುಶ್ರೀ ಮದ್ದೇವಲ ಮಹರ್ಷಿ ಜಯಂತಿಯನ್ನು ಅಚರಣೆ ಮಾಡಿ ದರು. ಲಕ್ಷ್ಮಣ್, ಶಿವಕುಮಾರ್, ಚಿಂತು ಪರಮೇಶ್, ಕೆ.ಎನ್.ಸುರೇಶ್, ಜಿ.ಶ್ರೀನಿವಾಸ್, ವಿ.ಸದಾಶಿವ, ಮಂಜುನಾಥ್ ಇದ್ದರು.
Published on

ಕೊಳ್ಳೇಗಾಲ: ಪಟ್ಟಣದಲ್ಲಿ ಸೋಮವಾರ ಆಂಧ್ರ ದೇವಾಂಗದ ಕುಲ ಬಾಂಧವರಿಂದ ಶ್ರೀ ಮದ್ದೇವಲ ಮಹರ್ಷಿ ಜಯಂತಿಯನ್ನು ಅದ್ಧೂರಿಯಾಗಿ ಅಚರಿಸಲಾಯಿತು.

ಪಟ್ಟಣದ ದೇವಲ ಮಹರ್ಷಿ ವೃತ್ತದಲ್ಲಿ ಶ್ರೀ ಮದ್ದೇವಲ ಮಹರ್ಷಿ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿದ ಸಮಾಜದ ಮುಖಂಡರು, ಬಳಿಕ ಸಾರ್ವಜನಿಕರಿಗೆ ಅನ್ನದಾನ ಮಾಡಿದರು. ಬಳಿಕ ದೇವಾಂಗಪೇಟೆ ಬಡಾವಣೆಯ ಚೌಡೇಶ್ವರಿ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಮಹಾಮಂಗಳಾರತಿ ನಡೆಸಲಾಯಿತು. ಬಳಿಕ ಚೌಡೇಶ್ವರಿ ಕಲ್ಯಾಣ ಮಂಟಪ ಹಾಗೂ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಅನ್ನಸಂತರ್ಪಣೆ ಕಾಯಕ್ರಮ ಆಯೋಜಿಸಸಲಾಗಿತ್ತು.

ಈ ಸಂದರ್ಭದಲ್ಲಿ ದೇವಾಂಗಪೇಟೆಯ ಶೆಟ್ಟಿಗಾರರಾದ ಲಕ್ಷ್ಮಣ್, ಶಿವಕುಮಾರ್, ಚೌಡೇಶ್ವರಿ ಕಲ್ಯಾಣ ಮಂಟಪ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಚಿಂತು ಪರಮೇಶ್, ಉಪಾಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯದರ್ಶಿ ಜಿ.ಶ್ರೀನಿವಾಸ್, ಸಹಕಾರ್ಯದರ್ಶಿ ವಿ.ಸದಾಶಿವ, ರಾಜರಾಜೇಶ್ವರಿ ಕಲ್ಯಾಣ ಮಂಟಪದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ರವೀಂದ್ರ, ಖಜಾಂಚಿ ನಾಗರ್ಜುನ್, ಧರ್ಮದರ್ಶಿ ಹಾಗೂ ಕುಲ ಬಾಂಧವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net