ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅನುದಾನ ನೀಡಿ

Devadurga MP visit to jalahalli temple
ದೇವದುರ್ಗ ತಾಲೂಕು ಜಾಲಹಳ್ಳಿ ಶ್ರೀಲಕ್ಷ್ಮೀ ರಂಗನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದ ಜಿ.ಕುಮಾರ ನಾಯಕ ಅವರನ್ನು ಪೂಜಾರಿಗಳು ಸನ್ಮಾನಿಸಿ ಕಲ್ಯಾಣ ಮಂಟಪಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು. ಪೂಜಾರಿಗಳಾದ ವೆಂಕೋಬ ಪೂಜಾರಿ, ಗಿರಿಯಪ್ಪ ಪೂಜಾರಿ, ಮೌನೇಶ ಪೂಜಾರಿ, ಅಮರೇಶ ಪೂಜಾರಿ, ಗಂಗಪ್ಪಯ್ಯ ಪೂಜಾರಿ ಮಾನಸಗಲ್ ಇತರರಿದ್ದರು.
Published on

ದೇವದುರ್ಗ: ತಾಲೂಕಿನ ಜಾಲಹಳ್ಳಿಯ ಶ್ರೀಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಮಂಟಪ ನಿರ್ಮಿಸಲು ಅನುದಾನ ಮಂಜೂರು ಮಾಡುವಂತೆ ದೇವಸ್ಥಾನದ ಪೂಜಾರಿಗಳು ಶನಿವಾರ ದೇವಾಲಯಕ್ಕೆ ಭೇಟಿ ನೀಡಿದ್ದ ಸಂಸದ ಜಿ.ಕುಮಾರ ನಾಯಕಗೆ ಮನವಿ ಮಾಡಿದರು.

ರಂಗನಾಥಸ್ವಾಮಿ ದೇವಸ್ಥಾನ ಭಕ್ತರ ಆರಾಧ್ಯ ದೈವವಾಗಿದ್ದು ಜಿಲ್ಲೆ ಮಾತ್ರವಲ್ಲ ಹೊರಜಿಲ್ಲೆಯಲ್ಲೂ ಲಕ್ಷಾಂತರ ಭಕ್ತರು ಇದ್ದಾರೆ. ಜಾತ್ರೆ, ರಥೋತ್ಸವ ದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇವಸ್ಥಾನದ ಪಕ್ಕದಲ್ಲಿ ಈ ಹಿಂದೆ ನಿರ್ಮಿಸಿದ ಭವನ ಹಳೆಯದಾಗಿದ್ದು, ಭಕ್ತರಿಗೆ ಸಾಲುತ್ತಿಲ್ಲ. ಮೇಲ್ಭಾಗದಲ್ಲಿ ಎರಡನೇ ಅಂತಸ್ತಿನಲ್ಲಿ ಕಲ್ಯಾಣ ಮಂಟಪದ ಅಗತ್ಯವಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಮುಜರಾಯಿ ಇಲಾಖೆ ಇಲ್ಲವೆ ಸಂಸದರ ಅನುದಾನದಡಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಸಂಸದ ಕುಮಾರ ನಾಯಕ ಪ್ರತಿಕ್ರಿಯಿಸಿ, ಕಲ್ಯಾಣ ಮಂಟಪ ವೀಕ್ಷಣೆ ಮಾಡಿ ಸರ್ಕಾರದಿಂದ ಅನುದಾನ ಬಿಡುಗಡೆ ಪತ್ರ ಬರೆಯಲಾಗುವುದು. ಅಂದಾಜು ವೆಚ್ಚ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು. ದೇವಸ್ಥಾನ ಪೂಜಾರಿಗಳಾದ ವೆಂಕೋಬ, ಗಿರಿಯಪ್ಪ, ಮೌನೇಶ, ಅಮರೇಶ, ಗಂಗಪ್ಪಯ್ಯ, ಜಿಪಂ ಮಾಜಿ ಸದಸ್ಯ ಬಸವರಾಜ ಪಂಪಾಪತಿ, ವೇಣುಗೋಪಾಲಗೌಡ ವಕೀಲ, ಗ್ರಾಪಂ ಸದಸ್ಯರಾದ ತಿಮ್ಮಣ್ಣ, ಮಲ್ಲಪ್ಪ ಸೌದ್ರಿ, ಅಯ್ಯಪ್ಪ ಸ್ವಾಮಿ, ರಂಗಪ್ಪ ತೊಗರಿ, ರಂಗಪ್ಪ ಬಂಡಿ, ರಾಜಾ ವಾಸುದೇವ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net