ಶ್ರೀ ಲಕ್ಷ್ಮೀ ರಂಗನಾಥ ರಥೋತ್ಸವ ಅದ್ದೂರಿ

dvd jatre
ದೇವದುರ್ಗ ತಾಲೂಕು ಮಾನಸಗಲ್‌ನಲ್ಲಿ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಜರುಗಿತು.
Published on

ದೇವದುರ್ಗ: ತಾಲೂಕಿನ ಭಕ್ತರ ಆರಾಧ್ಯದೈವ ಮಾನಸಗಲ್ ಗ್ರಾಮದ ಶ್ರೀಲಕ್ಷ್ಮೀ ರಂಗನಾಥ ಸ್ವಾಮಿ ಜಾತ್ರೆ ನಿಮಿತ್ತ ಸೋಮವಾರ ಸಂಜೆ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ಜರುಗಿತು.

ಪ್ರತಿವರ್ಷ ಬುದ್ಧ ಪೂರ್ಣಿಮೆಯಂದು ಜರುಗುವ ಶ್ರೀಲಕ್ಷ್ಮೀ ರಂಗನಾಥ ರಥೋತ್ಸವ ಎರಡನೇ ತಿರುಪತಿ ಎಂದೆ ಖ್ಯಾತಿ ಪಡೆದಿದೆ. ಬೆಳಗ್ಗೆ 6ಗಂಟೆಗೆ ದೇವರಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ಜರುಗಿತು. ಜಾತ್ರೆ ನಿಮಿತ್ತ ಕಳೆದ ಒಂಬತ್ತು ದಿನಗಳಿಂದ ಕಂಕಣ ಕಟ್ಟು ಕಾರ್ಯಕ್ರಮ ಜರುಗಿತು. ಕಂಕಣ ಕಟ್ಟಿದ ಮಾಲಾಧಾರಿಗಳು ಗೋವಿಂದ ನಾಮ ಜಪಿಸಿ ವಿಶೇಷ ಪೂಜೆ ನೆರವೇರಿಸಿದರು.

ಬಳಿಕ ಇರಬಗೇರಾ ಭಕ್ತರು ಮಾನಸಗಲ್ ದೇವಸ್ಥಾನವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ನಂತರ ಕೆ.ಇರಬಗೇರಾ, ಹೇಮನೂರು, ಕೋತಿಗುಡ್ಡ, ತೆಗ್ಗಿಹಾಳ ಸೇರಿ ವಿವಿಧ ಗ್ರಾಮದ ಭಕ್ತರು ಪಲ್ಲಕ್ಕಿ ಉತ್ಸವ ಹಾಗೂ ನೀರಿನ ಆಟ ಕಾರ್ಯಕ್ರಮ ನಡೆಸಿಕೊಟ್ಟರು. ಸಂಜೆ 5 ಗಂಟೆಗೆ ಪಲ್ಲಕ್ಕಿಯಲ್ಲಿ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ವಿಗ್ರಹ ಮೆರವಣಿ ಮಾಡಿ ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು. 6 ಗಂಟೆಗೆ ಸಾವಿರಾರು ಭಕ್ತರ ಮಧ್ಯೆ ಬ್ರಹ್ಮ ರಥೋತ್ಸವ ಜರುಗಲಿದೆ. ಭಕ್ತರು ಹೂವು, ಉತ್ತತ್ತಿ ಅರ್ಪಿಸಿ ಭಕ್ತಿ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net