ಕುಕ್ಕುವಾಡ ಶ್ರೀ ಅಂಬಾ ಭವಾನಿ ರಾಜಬೀದಿ ಉತ್ಸವ

CHN MEREVANIGE
Published on

ಚನ್ನಗಿರಿ : ನಗರದೇವತೆ ಶ್ರೀ ಕುಕ್ಕುವಾಡ ಅಂಬಾಭವಾನಿ ಅಮ್ಮನವರ ರಾಜಬೀದಿ ಉತ್ಸವದ ಬಳಿಕ ಶನಿವಾರ ದೇವಿಯ ಜಾತ್ರೆ ಮತ್ತು ಮಹಾಕಾರ್ತಿಕೋತ್ಸವ ಸಂಪನ್ನಗೊಂಡಿತು.

ಜಾತ್ರೋತ್ಸವದ ಕೊನೆಯ ದಿನವಾದ ಶನಿವಾರ, ದೇವಸ್ಥಾನದಲ್ಲಿ ದೇವರಿಗೆ ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ನಡೆದವು. ನಂತರ ಹೂವಿನಿಂದ ಅಲಂಕರಿಸಿದ್ದ ವಾಹನದಲ್ಲಿ ದೇವಿಯನ್ನು ಕೂರಿಸಲಾಯಿತು. ದೇವಸ್ಥಾನದಿಂದ ಗಣಪತಿ ವೃತ್ತ, ಕೋಟೆ ವೃತ್ತ, ರಾಷ್ಟ್ರೀಯ ಹೆದ್ದಾರಿ ರಸ್ತೆ ಮೂಲಕ ಪಟ್ಟಣದ ಮುಖ್ಯ ಬಸ್ ನಿಲ್ದಾಣ, ಕಲ್ಲುಸಾಗರ ರಸ್ತೆ ಮೂಲಕ ಮರಳಿ ದೇವಸ್ಥಾನಕ್ಕೆ ದೇವಿಯನ್ನು ಕರೆ ತರಲಾಯಿತು.

ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು, ಜಾನಪದ ತಂಡ, ವಾಹನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ, ಹನುಮಾನ್ ಪ್ರತಿಮೆ ಮೆರುಗು ನೀಡಿದವು. ಮಹಿಳೆಯರು, ಮಕ್ಕಳು ಸಂಭ್ರಮದಿಂದ ಭಾಗವಹಿಸಿದ್ದರು.

ತಾಲೂಕು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಎಂ.ಬಿ.ಶಿವಾಜಿರಾವ್, ಮರಾಠ ಸಮಾಜದ ಪ್ರಮುಖರಾದ ಎಂ.ಎಂ.ಮಂಜುನಾಥ್ ಜಾಧವ್, ಬಿ.ಎಂ.ಕುಬೇಂದ್ರೋಜಿರಾವ್, ಜಾತ್ರಾ ಸಮಿತಿಯ ಅಧ್ಯಕ್ಷ ಶ್ರೀಕಾಂತ್, ನಾಗರಾಜ್, ದೀಪಕ್​ಗಾರ್ಘ, ಮಂಜುನಾಥ್, ಶಿವಾಜಿರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net