ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಹುನ್ನಾರ

kpp1 (Dinesh Hosur)
Published on

ಕೊಪ್ಪ: ಹಿಂದುಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಲುಷಿತ ವಾತಾವರಣ ಸೃಷ್ಟಿಸಿ, ಧರ್ಮದರ್ಶಿಗಳ ಹೆಸರಿಗೆ ಮಸಿ ಬಳಿಯುವ ಕಾರ್ಯ ಮಾಡಲಾಗುತ್ತಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು ಹೇಳಿದರು.

ಈ ಹಿಂದೆ ತಿರುಪತಿಗೆ ಕಟ್ಟೆ ಹೆಸರು ತರುವ ಪ್ರಯತ್ನಗಳು ನಡೆದಿದ್ದವು. ಈಗ ಧರ್ಮಸ್ಥಳದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿ ತೇಜೋವಧೆ ಮಾಡುವ ಕೆಲಸ ನಡೆಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗಿರುವ ಎಡಪಂಥೀಯರ ಮಾತುಗಳನ್ನು ಕೇಳಿ ಅನಾಮಿಕ ವ್ಯಕ್ತಿಯ ಪ್ರಕರಣವನ್ನು ಎಸ್‌ಐಟಿಗೆ ನೀಡಿದ್ದಾರೆ. ರಾಜ್ಯದಲ್ಲಿ ಹತ್ತಾರು ಪ್ರಕರಣಗಳು ಕಣ್ಣ ಮುಂದೆ ಇದ್ದರೂ ಸಹ ಈ ಪ್ರಕರಣಕ್ಕೆ ವಿಶೇಷ ಕಾಳಜಿವಹಿಸಿದಂತೆ ಕಾಣುತ್ತದೆ. ಸತ್ಯಾಂಶ ಕೂಡಲೇ ಹೊರಬರಲಿದೆ ಎಂದರು.

ಅನಾಮಿಕ ವ್ಯಕ್ತಿ ತೊರಿಸಿದ ಜಾಗದಲ್ಲಿ ಅಸ್ತಿ ಪಂಜರಗಳು ಪತ್ತೆಯಾಗಿಲ್ಲ. ರ‌್ಯಾಡರ್ ಬಳಸಿ ಸರ್ಕಾರ ಶೋಧ ಕಾರ್ಯಮಾಡಲಿ. ತಪ್ಪಿತಸ್ಥರಿಗೆ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸುವವರಿಗೆ ಶಿಕ್ಷೆಯಾಗಲಿ. ಎಸ್‌ಡಿಪಿಐ, ಪಿಎ್ಐ ಸಂಘಟನೆ ಕಾರ್ಯಕರ್ತರು ತಮ್ಮ ಆಚಾರ, ವಿಚಾರವಲ್ಲದ ವಿಷಯದಲ್ಲಿ ಮೂಗು ತೂರಿಸುವುದು ಸರಿಯಲ್ಲ. ಉಜಿರೆ ಆಸ್ಪತ್ರೆ ಆವರಣದಲ್ಲಿ ಈ ಸಂಘಟನೆಯವರಿಗೆ ಏನು ಕೆಲಸ ಎಂದು ಪ್ರಶ್ನಿಸಿದ್ದಾರೆ.

ವಕ್ತಾರ ಹೆಚ್.ಆರ್.ಜಗದೀಶ್ ಮಾತನಾಡಿ, ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸಲಾಗುತ್ತಿದೆ. ಶ್ರೀ ಕ್ಷೇತ್ರ ನಡೆಸಿಕೊಂಡು ಬರುತ್ತಿರುವ ಉತ್ತಮ ಕೆಲಸಗಳನ್ನು ಸಹಿಸಲಾದ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಇಂತಹ ಅಪಪ್ರಚಾರ ನಡೆಸುವವ ವಿರುದ್ಧ ಬಿಜೆಪಿ ಧ್ವನಿ ಎತ್ತಲಿದೆ. ಈ ಕುರಿತು ಮುಂದಿನ ದಿನದಲ್ಲಿ ಹೋರಾಟ ರೂಪಿಸಲಾಗುವುದು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾಬಲ್‌ರಾವ್, ಮಂಡಲ ಕಾರ್ಯದರ್ಶಿ ರೇವಂತ್ ಗೌಡ, ಪ್ರಧಾನ ಕಾರ್ಯದರ್ಶಿ ಬಿಷೇಜ್ ಭಟ್, ಪಪಂ ಮಾಜಿ ಅಧ್ಯಕ್ಷ ಉಮೇಶ್ ಶೇಟ್, ತಾಪಂ ಮಾಜಿ ಸದಸ್ಯ ಸುಧಾಕರ್, ಬಿಜೆಪಿ ಮುಖಂಡ ವಿಜಯ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net