ಪರಶುರಾಮಪುರದಲ್ಲಿ ಶ್ರೀಕೃಷ್ಣ ಜಯಂತಿ

P PURA JAYANTHII 11 (2)
Published on

ಪರಶುರಾಮಪುರ: ಗ್ರಾಮದ ಗೊಲ್ಲ ಸಮುದಾಯದವರು ಸೋಮವಾರ ಶ್ರೀ ಕೃಷ್ಣ ಜಯಂತಿ ಆಚರಿಸಿದರು.
ಜಯಂತ್ಯುತ್ಸವ ಅಂಗವಾಗಿ ಸಾರೋಟಿನಲ್ಲಿ ಶ್ರೀಕೃಷ್ಣನ ಭಾವಚಿತ್ರ ಮೆರವಣಿಗೆ ನಡೆಯಿತು. ವಿವಿಧ ಜನಪದ ಕಲಾತಂಡಗಳು, ಕುಂಭ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.
ಮೆರವಣಿಗೆಯಲ್ಲಿ ಗೊಂಬೆಕುಣಿತ, ಮಹಿಳೆಯರಿಂದ ಕುಂಭ, ವಾಲಗ ಕಹಳೆ ಡೋಲು ಮೇಳಗಳೊಂದಿಗೆ ಡಿಜೆ ಮೆರವಣಿಗೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿದರು.
ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ವೀಳ್ಯೆ ನೀಡಿ ಪ್ರಸಾದ ವಿತರಿಸಲಾಯಿತು. ನಂತರ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆ ನಡೆದವು.
ಮೆರವಣಿಗೆಯಲ್ಲಿ ಶ್ರೀ ಕೃಷ್ಣಯಾದವ ಯುವಕ ಸಂಘ ಹಾಗೂ ಗೋಕುಲ ನಗರದ ಯುವಕರು, ಗೊಲ್ಲರಹಟ್ಟಿಯ ಹೆಣ್ಣು ಮಕ್ಕಳು ಹನ್ನೆರಡು ಕೈವಾಡಸ್ತರು, ಗೊಲ್ಲರಹಟ್ಟಿಯ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net