ಪೊಯ್ಯೆ ಶ್ರೀಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

01
Published on

ಕಾಸರಗೋಡು: ಪಾವೂರು ಪೊಯ್ಯೆ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಶ್ರೀಕೃಷ್ಣವೇಷ ಸ್ಪರ್ಧೆ ಹಾಗೂ ಮೊಸರು ಕುಡಿಕೆ ಕಾರ್ಯಕ್ರಮ ಜರುಗಿತು. ಕ್ಷೇತ್ರ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಕೆದುಂಬಾಡಿ ಉದ್ಘಾಟಿಸಿದರು.

ಸಮಾರೋಪ ಸಮಾರಂಭದಲ್ಲಿ ಭಜನಾ ಮಂಡಳಿ ಅಧ್ಯಕ್ಷ ಮೋನಪ್ಪ ಶೆಟ್ಟಿ ಮುಟ್ಲ ಅಧ್ಯಕ್ಷತೆ ವಹಿಸಿದ್ದರು. ಶ್ರೀಧರ ಶೆಟ್ಟಿ ಪಾವೂರು ಗುತ್ತು, ವಿಶ್ವಂಬರ ನಾಯ್ಕ ಮಳಿಗುತ್ತು, ಬಾವಳಿ ಗುಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಅಡ್ಕ, ಗೌರವ ಸಲಹೆಗಾರ ಶಂಕರ್ ನಾರಾಯಣ ಮರಿಕಾಪು, ತೀಯಾ ವೆಲ್ಫರ್ ಸಮಿತಿ ಕಾಸರಗೋಡು ಜಿಲ್ಲಾ ಟಕದ ಅಧ್ಯಕ್ಷ ಗಣೇಶ್ ಪಾವೂರು, ಕ್ಷೇತ್ರ ಆಡಳಿತ ಸಮಿತಿ ಸದಸ್ಯರಾದ ತ್ಯಾಂಪಣ್ಣ ರೈ ಪಾವೂರು, ದಯಾನಂದ ಸಾಲ್ಯಾನ್ ಕೊಪ್ಪಳ, ರವಿ ಮುಡಿಮಾರ್, ಅಶೋಕ್ ಪಾವೂರು, ಸದಾಶಿವ ಶೆಟ್ಟಿ ಬಾವಳಿಗುಳಿ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಭೋಜ ಸ್ವಾಗತಿಸಿದರು. ವಿಶ್ವನಾಥ ಶೆಟ್ಟಿ ಕೋಡಿಮುಗೇರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net