ಜಿಲ್ಲೆಯಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

New Shri Krishna
Published on

ಹುಬ್ಬಳ್ಳಿ : ಧಾರವಾಡ ಜಿಲ್ಲೆಯಾದ್ಯಂತ ಭಕ್ತರು ಸೋಮವಾರದಂದು ಶ್ರೀಕೃಷ್ಣನ ಜನ್ಮಾಷ್ಟಮಿ ಆಚರಿಸಿದರು.

ಜನ್ಮಾಷ್ಟಮಿ ಅಂಗವಾಗಿ ಶ್ರೀಕೃಷ್ಣ ದೇವಾಲಯಗಳನ್ನು ವಿದ್ಯುತ್​ದೀಪಾಲಂಕರಗಳಿಂದ ಶೃಂಗರಿಸಲಾಗಿತ್ತು. ಹುಬ್ಬಳ್ಳಿ-ಧಾರವಾಡ ಮಧ್ಯದ ಇಸ್ಕಾನ್ ದೇವಾಲಯದಲ್ಲಿ ಭಾನುವಾರದಿಂದಲೇ ಹಲವಾರು ಧಾರ್ವಿುಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಸ್ಕಾನ್​ನಲ್ಲಿನ ಶ್ರೀಕೃಷ್ಣ-ಬಲರಾಮರ ಮೂರ್ತಿಯನ್ನು ಹೂವುಗಳಿಂದ ಹಾಗೂ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಜಿಲ್ಲೆಯ ವಿವಿಧೆಡೆ ಭಕ್ತರು ಮೊಸರಿನ ಗಡಿಗೆ ಒಡೆಯುವ ಮೂಲಕ ಜನ್ಮಾಷ್ಟಮಿ ಆಚರಿಸಿದರು. ಶ್ರೀಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ, ಮಹಿಳೆಯರು ತೊಟ್ಟಿಲು ತೂಗುವ ದೃಶ್ಯ ಕಂಡುಬಂದಿತು.

ಎಲ್ಲೆಡೆ ‘ಹರೇ ಕೃಷ್ಣಾ...ಹರೇ ರಾಮ...’ ಹಾಗೂ ಮತ್ತಿತರ ಶ್ರೀ ಕೃಷ್ಣನ ಮಂತ್ರಗಳು ಕೇಳಿಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net