

ಸಿಂಧನೂರು: ನಗರದ ಬಪ್ಪೂರ ರಸ್ತೆ ಮಾರ್ಗದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶನಿವಾರ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಜನ್ಮಾಷ್ಟಮಿ ಅಂಗವಾಗಿ ವಿಷ್ಣುಸಹಸ್ರನಾಮ ಪಾರಾಯಣ, ಮಹಾಮಂಗಳಾರತಿ, ಶ್ರೀಕೃಷ್ಣ ಪೂಜೆ, ಭಜನೆ, ಉಪನ್ಯಾಸ ಕಾರ್ಯಕ್ರಮಗಳು ಜರುಗಿದವು. ಗಂಗಾವತಿಯ ಹರೀಶ ಆಚಾರ್ಯರು ಪೂಜೆ ನಡೆಸಿಕೊಟ್ಟರು. ಯುವ ವಾಗ್ಮಿ ಕಿರಣಕುಮಾರ ವಿವೇಕವಂಶಿ ಉಪನ್ಯಾಸ ನೀಡಿದರು.
ಆಶ್ರಮದ ಅಧ್ಯಕ್ಷ ಸ್ವಾಮಿ ಸದಾನಂದ ಮಹಾರಾಜ್ ಅವರು ಭಜನೆ ಹೇಳಿಕೊಟ್ಟರು. ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯ ವೇಷಧಾರಿಗಳಾಗಿ ಎಲ್ಲರ ಗಮನ ಸೆಳೆದರು.