

ಆನೇಕಲ್ : ಬಿಬಿಎಂಪಿ ಚುನಾವಣೆ ನಡೆಸಲು ಶ್ರೀ ಕ್ರಮ ಕೈಗೊಂಡು ಅ.31ರೊಳಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಬೆಂಗಳೂರು ದಣ ೇತ್ರ ವ್ಯಾಪ್ತಿಯ ದೊಡ್ಡ ತೋಗೂರಿನ ವೇಲಂಕಣಿ ರಸ್ತೆಯಲ್ಲಿ ದೊಡ್ಡ ತೋಗೂರು ಪಟ್ಟಣ ಪಂಚಾಯಿತಿ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸರ್ಕಾರ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೊಡ್ಡ ತೋಗೂರು ಪಟ್ಟಣ ಪಂಚಾಯಿತಿ ಕಾರ್ಯಾಲಯ ಬೆಂಗಳೂರು ದಣ ಪಾಲಿಕೆ ಕಚೇರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಯಲ್ಲಿನ ಕೆಲವು ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಪಾಲಿಕೆ ವ್ಯಾಪ್ತಿಗೆ ಒಳಪಡಿಸಲು ಚಿಂತನೆ ನಡೆಸಲಾಗಿದೆ. ಕಾಂಗ್ರೆಸ್ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಪಕ್ಷ ಭೇದ ಮರೆತು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಂಚಾರ ದಟ್ಟಣೆ ನಿಯಂತ್ರಿಸಲು ಸುರಂಗ ಮಾರ್ಗಕ್ಕಿಂತ ಮುಂಚಿತವಾಗಿ ಫ್ಲೆಓವರ್ ನಿರ್ಮಿಸಲು ಯೋಜಿಸಲಾಗಿದೆ.13 ಕಿಮೀ ಫ್ಲೆಓವರ್, 40ಕ್ಕೂ ಹೆಚ್ಚು ಡಬಲ್ ಡೆಕ್, ಟನಲ್ ನಿರ್ಮಾಣಕ್ಕೆ 17 ಸಾವಿರ ಕೋಟಿಗಳಿಗೆ ಟೆಂಡರ್ ಆಹ್ವಾನಿಸಲಾಗಿದ್ದು, ಒಂದೆರಡು ಕಂಪನಿಗಳು ನಿರ್ಮಾಣಕ್ಕೆ ಮುಂದೆ ಬಂದಿವೆ ಎಂದು ತಿಳಿಸಿದರು. ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಮಾತು ಆರಂಭಿಸಿದ ಶಾಸಕ ಎಂ.ಕೃಷ್ಣಪ್ಪ, ಎಲೆಕ್ಟ್ರಾನಿಕ್ ಸಿಟಿಗೆ ಕೇವಲ 8 ಗಂಟೆಗಳ ಕಾಲ ಕಾವೇರಿ ನೀರು ಬಿಡುಗಡೆ ಮಾಡಲಾಗುತ್ತಿದೆ. ನೀರಿನ ಅಭಾವ ಸರಿದೂಗಿಸಲು ಉಳಿದ 16 ಗಂಟೆಗಳಲ್ಲಿ 8 ಗಂಟೆಗಳ ಕಾಲ ವಸತಿ ದರದಲ್ಲಿ ಕಾವೇರಿ ನೀರು ಟ್ಯಾಂಕರ್ ಮೂಲಕ ಒದಗಿಸುವಂತೆ ಉಪ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದರು.
ಗ್ರೇಟರ್ ಬೆಂಗಳೂರು ಆಗುತ್ತಿರುವ ಸಂದರ್ಭದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೊಡ್ಡ ತೋಗೂರು ಕೆರೆಗಳನ್ನು ಸಂರಕ್ಷಣೆ ಮಾಡಲು ಎಸ್.ಟಿ.ಪಿ ನಿರ್ಮಾಣದ ಅಗತ್ಯವಿದೆ. ದೊಡ್ಡತೋಗೂರು ಸುತ್ತಮುತ್ತ ಐಟಿಬಿಟಿ ಕಂಪನಿಗಳು ಎಲೆಕ್ಟ್ರಾನಿಕ್ ಸಿಟಿಗಳಿದ್ದು, ಈ ಭಾಗದಲ್ಲಿ ಜನಸಂಖ್ಯೆಯೂ ಹೆಚ್ಚಾಗಿದೆ. ಆದ್ದರಿಂದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನ ಹರಿಸಬೇಕು ಎಂದರು.
ಸೌಲಭ್ಯ ವಿತರಣೆ : ಅಂಗವಿಕಲರಿಗೆ ತ್ರಿಚಕ್ರ ವಾಹನ, ಪೌರಕಾರ್ಮಿಕರಿಗೆ ಜೀವ ವಿಮಾ ಪಾಲಿಸಿ, ಇ&ಖಾತಾ ವಿತರಣೆ ಸೇರಿ 100ಕ್ಕೂ ಹೆಚ್ಚಿನ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಲಾಯಿತು.