

ಎನ್.ಆರ್.ಪುರ: ಶ್ರೀಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಮೇ. 20ರಿಂದ 22ರ ವರೆಗೆ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಕೋಟೆ ಶ್ರೀ ಮಾರಿಕಾಂಬ ದೇವಿಜಾತ್ರಾ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಹೇಳಿದರು.
ಶ್ರೀಕೋಟೆ ಮಾರಿಕಾಂಬ ದೇವಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅಧಿಕೃತವಾಗಿ ಘೋಷಣೆ ಮಾಡಿ ಮಾತನಾಡಿ, ಇಲ್ಲಿನ ಮಾರಿಗದ್ದುಗೆ ವಿಶೇಷವಾಗಿ ಉದ್ಭವವಾಗಿದೆ. ಅನಾಧಿಕಾಲದಿಂದ ಶ್ರೀಕೋಟೆ ಮಾರಿಕಾಂಬ ದೇವಿ ಊರಿನ ತಳ ಸಮುದಾಯದಿಂದ ಹಿಡಿದು ಎಲ್ಲ ಸಮುದಾಯದವರೆಗೆ ಸಮಾನವಾಗಿ ಹರಿಸಿ ಹಾರೈಸಿದ್ದಾಳೆ. ಪ್ರತೀ ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯಲಿದೆ ಎಂದರು.
ಜಾತ್ರಾ ಸಮಿತಿ ಅಧ್ಯಕ್ಷನಾಗಿ ಆರನೇ ಬಾರಿಗೆ ನನ್ನನ್ನು ಆಯ್ಕೆ ಮಾಡಿದ್ದು, ಎಲ್ಲರೂ ಒಗ್ಗೂಡಿ, ಪ್ರೀತಿಯಿಂದ ಊರಿನ ಜಾತ್ರೆ ಯಶಸ್ವಿಗೆ ಶ್ರಮಿಸಬೇಕು. ಈ ಬಾರಿ ಜಾತ್ರೆ ವಿಜೃಂಭಣೆಯಿಂದ ನಡೆಸಲಾಗುವುದು. ನಿಮ್ಮೆಲ್ಲರ ಸಹಕಾರ ಹಾಗೂ ಮಾರಿಕಾಂಬ ದೇವಿ ಆಶೀರ್ವಾದಿಂದ ಜಾತ್ರೆ ನಡೆಯಲಿದೆ. ಈಗಾಗಲೇ ದೇವಿಯ ವಿಗ್ರಹದ ಕೆತ್ತನೆಗೆ ವಿಳ್ಯೆ ನೀಡಲಾಗಿದೆ ಎಂದರು.