ಶ್ರೀ ಕರಿಯಮ್ಮ , ಶ್ರೀ ಅಂತರಘಟ್ಟಮ್ಮ ದೇವಿ ಜಾತ್ರಾ ಮಹೋತ್ಸವ

11 nrp 2 (1) (1)
ಶ್ರೀ ಅಂತರಘಟ್ಟಮ್ಮ ದೇವಿ
Published on

ಎನ್.ಆರ್.ಪುರ: ಪಟ್ಟಣದ ಮೇದರ ಬೀದಿಯ ಶ್ರೀ ಕರಿಯಮ್ಮ ದೇವಿ ಹಾಗೂ ಶ್ರೀ ಅಂತರಘಟ್ಟಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಶನಿವಾರ ರಾತ್ರಿ ದಂದಿ ಸೇವೆಯೊಂದಿಗೆ ಅಮ್ಮನವರನ್ನು ರಾಜಬೀದಿಯಲ್ಲಿ ಹೂವಿನ ಅಲಂಕಾರ ಹಾಗೂ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಹೊರಟು ಶ್ರೀ ಕೊಟ್ಟೂರು ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಾಗೂ ಮಂಗಳಾರತಿ ಮುಗಿಸಿಕೊಂಡು ಅಮ್ಮನವರನ್ನು ಮೇದರ ಬೀದಿಗೆ ಕರೆತರಲಾಯಿತು. ರಾತ್ರಿ ಕೆಂಡಾರ್ಚನೆ ವಿಧಿ ವಿಧಾನದೊಂದಿಗೆ ಕೆಂಡಾರ್ಚನೆಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಬೆಳಗಿನ ಜಾವ ಗಂಗಾ ಪೂಜೆಗೆ ತೆರಳಿ ಬ್ರಾಹ್ಮಿ ಮುಹೂರ್ತದಲ್ಲಿ ಕೆಂಡಾರ್ಚನೆ ನಡೆಯಿತು.
12 ರಂದು ಅನ್ನ ಸಂತರ್ಪಣೆ, ಅಮ್ಮನವರ ಓಕುಳಿ ಸೇವೆ ನಡೆಯಲಿದೆ. ಸಂಜೆ ವಿಶೇಷ ಭವ್ಯ ಮಂಟಪದೊಂದಿಗೆ ಸಿಡಿಮದ್ದಿನ ಪ್ರದರ್ಶನ, ವಾದ್ಯ ತಮಟೆ ಹಾಗೂ ಹಾಸ್ಯಗೊಂಬೆ, ವೀರಗಾಸೆ ತಂಡದ ಜತೆಯಲ್ಲಿ ಪಟ್ಟಣದ ರಾಜಬೀದಿಯಲ್ಲಿ ಮೆರವಣಿಗೆ ನಡೆಯಲಿದೆ. 13 ಎಂದು ರಾತ್ರಿ ಶ್ರೀ ಕೊಲ್ಲಾರೇಶ್ವರಿ ದೇವಿ, ಶ್ರೀ ಕರಿಯಮ್ಮ ದೇವಿ ಮತ್ತು ಶ್ರೀ ಅಂತರಘಟ್ಟಮ್ಮ ದೇವಿಗೆ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. 14 ರಂದು ಬೆಳಗ್ಗೆ ಶ್ರೀ ಅಂತರಘಟ್ಟಮ್ಮ ದೇವಿ ಮತ್ತು ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಮತ್ತು ಹರಕೆ ಸೇವೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net