ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶ್ರೀ ಕರಿಯಮ್ಮ ದೇವಿ ಜಾತ್ರೆ

10 Dwd 8 New
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ನೀರಲಕಟ್ಟಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿರುವ ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವವು ಗುರುವಾರ ವಿಜೃಂಭಣೆಯಿ0ದ ಜರುಗಿತು.
ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಪಾಲ್ಗೊಂಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು. ರಾಮಣ್ಣ ಮಾತನಾಡಿ, ದಸರಾ ಹಬ್ಬವನ್ನು ದೇಶಾದ್ಯಂತ ಆಚರಿಸಿ ಶಕ್ತಿ ದೇವತೆಯನ್ನು ಆರಾಽಸುತ್ತೇವೆ. ಭಾರತದಾದ್ಯಂತ ಪೂಜಿಸಲ್ಪಡುವ ಎಲ್ಲ ಶಕ್ತಿ ದೇವತೆಗಳ ಒಟ್ಟು ಸ್ವರೂಪವೇ ತಾಯಿ ಭಾರತಾಂಬೆ. ಹೀಗಾಗಿ ತಾಯಿ ಭಾರತಾಂಬೆಯನ್ನು ಪೂಜಿಸುವುದರ ಮೂಲಕ ದೇಶದ ಪ್ರಜೆಗಳು ಲೋಕ ಕಲ್ಯಾಣಕ್ಕಾಗಿ ಹೆಜ್ಜೆ ಇಡಬೇಕು ಎಂದರು.
ಜÁತ್ರೆಯ ಅಂಗವಾಗಿ ದುರ್ಗಾ ಹೋಮ, ಜೋಗಮ್ಮ ಪೂಜೆ, ಉಡಿಸೇವೆ, ಅನ್ನ ಸಂತರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶಾಲೆಯ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ, ಪ್ರಾಚಾರ್ಯೆ ಡಾ. ಅನಿತಾ ರೈ, ಆಡಳಿತ ಅಧಿಕಾರಿಗಳಾದ ಕುಮಾರಸ್ವಾಮಿ ಕುಲಕರ್ಣಿ, ಎಂ.ಎನ್. ಮಠಪತಿ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಹಾಗೂ ಸುತ್ತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net