ಶ್ರೀ ಕನ್ನಿಕಾಪರಮೇಶ್ವರಿಗೆ ವಿಶೇಷ ಪೂಜ

ಶ್ರೀ ಕನ್ನಿಕಾಪರಮೇಶ್ವರಿಗೆ ವಿಶೇಷ ಪೂಜ
ಗಂಗಾವತಿ ಹಿರೇಜಂತಕಲ್ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಅಧಿಕ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಮಣಿ ದೀಪ ವಿಶೇಷ ಪೂಜೆಗೆ ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಪದ್ಮಾವತಿ ದರೋಜಿ ಚಾಲನೆ ನೀಡಿದರು. ಪದಾಧಿಕಾರಿಗಳಾದ ರಾಧಿಕಾ, ರೇಖಾ, ಉಷಾ ಇತರರಿದ್ದರು.
Published on

ಗಂಗಾವತಿ: ನಗರದ ಹಿರೇಜಂತಕಲ್ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಅಧಿಕ ಶ್ರಾವಣ ಮಾಸದ ನಿಮಿತ್ತ ಸೋಮವಾರ ಮಣಿ ದೀಪ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಹಿರೇಜಂತಕಲ್, ವಿರುಪಾಪುರ ಆರ್ಯ ವೈಶ್ಯ ಸಮಾಜ ಮತ್ತು ವಾಸವಿ ಮಹಿಳಾ ಮಂಡಳಿ ನೇತೃತ್ವದಲ್ಲಿ ವಿಶೇಷ ಪೂಜೆ, ಪಾರಾಯಣ, ಸಂಕೀರ್ತನೆ ಜರುಗಿತು.

30 ಸುಮಂಗಲೆಯರನ್ನೊಳಗೊಂಡ ತಂಡ ಮಣಿ ದೀಪ ಸಂಕಲ್ಪ ಕೈಗೊಂಡಿದ್ದು, ಧಾರ್ಮಿಕ ಕೈಂಕರ್ಯಗಳ ಮೂಲಕ ಸಮಾಜದ ಸ್ವಾಸ್ತ್ಯ ಕಾಪಾಡಲಾಗುತ್ತಿದೆ. ತಿಂಗಳ ಪರ್ಯಂತ ವಿವಿಧ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ನಾಗರಾಜ್ ದರೋಜಿ ಮಾಹಿತಿ ನೀಡಿದರು.

ಪಂ.ಭೀಮಸೇನ್‌ಭಟ್, ಮಹಿಳಾ ಮಂಡಳಿ ಪದಾಧಿಕಾರಿಗಳಾದ ಪದ್ಮಾವತಿ ದರೋಜಿ, ರಾಧಿಕಾ, ರೇಖಾ, ಉಷಾ, ರುಕ್ಮಿಣಿಬಾಯಿ, ಸಮಾಜದ ಮುಖಂಡರಾದ ಎನ್.ಗಂಗಾಧರ, ಸಿ.ಗೋಪಾಲಸ್ವಾಮಿ, ವೆಂಕಟೇಶ ದಮ್ಮೂರು, ರವಿ ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net