

ರಾಯಚೂರು ನಗರದ ಹರಿಜನವಾಡ ಶ್ರೀ ಕಂಚು ಮಾರೆಮ್ಮ ದೇವಿ ಜಾತ್ರಾ ಮಹೋತ್ಸವವು ಜೂ.3 ರಿಂದ 6 ವರಗೆ ಆಯೋಜಿಸಲಾಗಿದೆಂದು ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಯಲ್ಲಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂ.3 ರಂದು ಸಂಜೆ 5 ಗಂಟಗೆ ತೊಟ್ಟಿಲುಸೇವೆ ನಡೆಯಲಿದೆ. ನಗರದ ಪಟೇಲ್ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಿ ವಿವಿಧ ವೃತ್ತದ ಮೂಲಕ ಶ್ರೀ ಕಂಚು ಮಾರೆಮ್ಮ ದೇವಸ್ಥಾನಕ್ಕೆ ತೆರಳುತ್ತದೆ.
ಜೂ.4 ರಂದು ಬೆಳಿಗ್ಗೆ 9 ರಿಂದ ರಾತ್ರಿ 8 ವರೆಗೆ ಕುಂಭ ಮೇಳ ನಡೆಯಲಿದೆ. ಜೂ.5 ರಂದು ಸಂಜೆ 5 ಗಂಟೆಗೆ ರಥೋತ್ಸವ, ಜೂ.6 ರಂದು ಸಂಜೆ 5 ಗಂಟೆಗೆ ಉಚ್ಚಯ ಮಹೋತ್ಸವ ಜರುಗಲಿದೆ. ಸುಮಾರು ವರ್ಷಗಳಿಂದ ನಡೆಯುತ್ತಿರುವ ಐತಿಹಾಸಿಕ ಜಾತ್ರ ವಿವಿಧ ಜಿಲ್ಲೆ, ರಾಜ್ಯಗಳಿಂದ ಭಕ್ತರು ಭಾಗವಹಿಸಲಿದ್ದಾರೆ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೌರವಧ್ಯಕ್ಷ ನರಸಿಂಹಲು ಮಾಡಗಿರಿ, ಉಪಾಧ್ಯಕ್ಷ ಈರಣ್ಣ ಭಂಡಾರಿ, ಪ್ರಧಾನ ಕಾರ್ಯದರ್ಶಿ ಎಸ್.ರಾಜು, ಪಿ.ಅಮರೇಶ, ರವೀಂದ್ರ ಜಲ್ದಾರ, ಪಿ.ಬೂದೆಪ್ಪ, ಪಾಲಿಕೆ ಸದಸ್ಯ ಎನ್.ಕೆ.ನಾಗರಾಜ, ಮುನಿಸ್ವಾಮಿ, ಜನಾರ್ಧನ ಹಳ್ಳಿಬೆಂಚಿ ಇದ್ದರು.