ಶ್ರೀ ಕಲ್ಲುರ್ಟಿ ಕೊರಗಜ್ಜ ವಾರ್ಷಿಕ ಧರ್ಮ ನೇಮೋತ್ಸವ

21 vpt. 2.1
ಶ್ರೀ ಎಡೂರು ಕ್ಷೇತ್ರದಲ್ಲಿ ನಡೆದ ಕಲ್ಲುರ್ಟಿ ಕೊರಗಜ್ಜ ದೈವಗಳ ವಾರ್ಷಿಕ ಧರ್ಮ ನೇಮೋತ್ಸವದಲ್ಲಿ ಪರಿವಾರ ದೈವಗಳ ದರ್ಶನ ಪಡೆದ ಭಕ್ತರು.
Published on

ವಿರಾಜಪೇಟೆ: ಪರಿವಾರ ದೈವಗಳ ಆರಾಧನೆಯೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಮ್ಮತ್ತಿ ಒಂಟಿಅಂಗಡಿ ಗ್ರಾಮದ ಶ್ರೀ ಕ್ಷೇತ್ರ ಎಡೂರಿನಲ್ಲಿ ಮಂಗಳವಾರ ವಾರ್ಷಿಕ ಧರ್ಮ ನೇಮೋತ್ಸವವು ಶ್ರದ್ಧಾ-ಭಕ್ತಿಯಿಂದ ನಡೆಯಿತು.

ವಿರಾಜಪೇಟೆ ತಾಲೂಕು ಅಮ್ಮತ್ತಿ ಒಂಟಿಅಂಗಡಿ ಶ್ರೀ ಕ್ಷೇತ್ರ ಎಡೂರು ಶ್ರೀ ಕಲ್ಲುರ್ಟಿ ಕೊರಗಜ್ಜ ದೈವಗಳ ವಾರ್ಷಿಕ ಧರ್ಮ ನೇಮೋತ್ಸವ ಇತ್ತೀಚೆಗೆ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿತು.

ಗಣಹೋಮ, ಆಶ್ಲೇಷ ಬಲಿ, ನಾಗ ತಂಬಿಲ ಮತ್ತು ಸತ್ಯನಾರಾಯಣ ಪೂಜೆ, ಜೋಡಿ ಕಲ್ಲುರ್ಟಿ, ಶ್ರೀ ಮಂತ್ರದೇವತೆ, ಶ್ರೀ ಮಂತ್ರ ಗುಳಿಗ ದೈವಗಳ ಪ್ರದರ್ಶನ ನಡೆಯಿತು. ಶ್ರೀ ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವ ನರ್ತನವನ್ನು ಭಕ್ತರು ಕಣ್ತುಂಬಿಕೊಂಡರು.

ದೈವಿಕ ಕಾರ್ಯಕ್ರಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಉತ್ಸವ ಸಂದರ್ಭದಲ್ಲಿ ದೇವಾಲಯ ಪ್ರಮುಖರಾದ ಲವನ್ ಪೂಜಾರಿ, ಐತಪ್ಪ ಪೂಜಾರಿ ಹಾಗೂ ದೇಗುಲದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪರಿವಾರ ದೈವಗಳ ಆರ್ಶಿವಾದ ಪಡೆದು ಪುನೀತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net