ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಲಕ್ಷ್ಮೀಸಾಗರದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನ ಸಮಿತಿ,ಗ್ರಾಮದಲ್ಲಿ ಫೆಬ್ರವರಿ 1ರಿಂದ ಎರಡು ದಿನಗಳ ಕಾಲ ನೂತನ ಶ್ರೀ ಕಲ್ಲೇಶ್ವರ ದೇವಸ್ಥಾನ,ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವನ್ನು ಏರ್ಪಡಿಸಿದೆ. 1ರಂದು ಸಂಜೆ 4.30ಕ್ಕೆ ಕಲಾ ತಂಡಗಳೊಂದಿಗೆ ಶ್ರೀ ಕಲ್ಲೇಶ್ವರ ಸ್ವಾಮಿ ನೂತನ ವಿಗ್ರಹದ ಮೆರವಣಿಗೆ ನಡೆಯಲಿದೆ.
ಸಂಜೆ 7ಕ್ಕೆ ಹಿರೇಗುಂಟನೂರು ಮೇಲ್ದುರ್ಗ ಮಠದ ಶ್ರೀ ಪುಟ್ಟಸ್ವಾಮೀಜಿ ಹಾಗೂ ಶ್ರೀ ರೇವಣ ಸಿದ್ದಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ಮಹಾಗಣಪತಿ ಪೂಜೆ,ಸ್ವಸ್ತಿ ಪುಣ್ಯಾಹ ವಾಚನ,ನಾಂದಿ ಸಮಾರಾಧನೆ, ವಾಸುಕಿ ಪಂಚ ಬ್ರಹ್ಮ ಕಳಸ, ಅಷ್ಟದಿಕ್ಪಾಲಕ ನವಗ್ರಹ ಮೃತ್ಯಂಜಯ ಸಪ್ತ ಸಭಾ ದೇವ ತಾ ಪೂಜೆ,ಮಹಾಗಣಪತಿ ಹೋಮ,ನವಗ್ರಹ ಹೋಮ,ಪರಿವಾರ ದೇವತಾ ಹೋಮ.
ಪ್ರಾತಃ ಕಾಲದಲ್ಲಿ ಪ್ರತಿಷ್ಠಾಪನೆ ನಂತರ ರುದ್ರಾಭಿಷೇಕ,ಅಷ್ಟೋತ್ತರ ವಿಮಾನ ಗೋಪುರ ಕಳಸಾರೋಹಣ ಹಾಗೂ ಪೂರ್ಣಾಹುತಿ ಬಳಿಕ ಮಹಾ ಮಂಗಳಾರತಿ. 2 ರಂದು ಬೆಳಗ್ಗೆ 9.15ಕ್ಕೆ ಜಗಳೂರು ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ‌್ಯ ಸ್ವಾಮೀಜಿ ಸಾನ್ನಿಧ್ಯ ದಲ್ಲಿ ನೂ ತನ ವಿಗ್ರಹ ಪ್ರತಿಷ್ಠಾನೆ ಹಾಗೂ ಕಳಸಾರೋಹಣ ನೆರವೇರಲಿದೆ. ಅನ್ನ ಸಂತರ್ಪಣೆ ಇರುತ್ತದೆ.
ಫೆ.6ರಿಂದ ಎಚ್‌ಡಿಪುರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಮಹೋತ್ಸವ
ಹೊಳಲ್ಕೆರೆ ತಾಲೂಕು ಹೊರಕೆರೆ ದೇವರಪುರದಲ್ಲಿ ಫೆಬ್ರವರಿ 6ರಿಂದ 8ರವರೆಗೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಗುಂಡಿನಸೇವಾ ಮತ್ತು ಅನ್ನದಕೋಟೆ ಮಹೋತ್ಸವ ಆಚರಣೆ ನಿಮಿತ್ಯ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹಿಂದು ಧಾರ್ಮಿಕ ಸಂಸ್ಥೆ ಗಳು ಮತ್ತು ಧರ್ಮದಾಯ ದತ್ತಿ ಇಲಾಖೆ ತಿಳಿಸಿದೆ.
6ರಿಂದ 7ರವರೆಗೆ ಶ್ರೀ ಸ್ವಾಮಿಯ ಮೂಲ ನೆಲೆಯಾದ ಕೃಷ್ಣಾಚಲ ಮತ್ತು ದೇವ ಸ್ಥಾನದ ಮುಂದಿನ ವೈಕುಂಠ ಮಂಟಪದಲ್ಲಿ ಪಂಚರಾತ್ರಾಗ ಮ ಪ್ರಕಾರ ಲೋಕಕಲ್ಯಾಣಾರ್ಥವಾಗಿ ಗುಂಡಿನ ಸೇವೆ ಮತ್ತು ಅನ್ನದಕೋಟೆ ಸೇರಿದಂತೆ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳು ನೆರವೇರ ಲಿವೆ. ವಿವಿಧ ಗಣ್ಯರು,ಅಧಿಕಾರಿಗಳು ಪಾಲ್ಗೊಳ್ಳುವರು.
6 ರಂದು ಬೆಳಿಗ್ಗೆ ದೇವಾಲಯದಲ್ಲಿ ಮಹಾಭಿಷೇಕ,ಮಧ್ಯಾಹ್ನ 3 ಗಂಟೆಗೆ ಸ್ವಾಮಿಯ ಕೃಷ್ಣಾಚಲ(ಕರೇಕಲ್ಲು)ಬೆಟ್ಟಕ್ಕೆ ತೆರಳುವುದು, ಸಂಜೆ 4 ಗಂಟೆಯಿಂದ ದೇವರುಗಳನ್ನು ಗ್ರಾಮದೇವತೆಗಳಾದ ದೊಡ್ಡ ಕರಿಯಮ್ಮದೇವಿ ಮತ್ತು ಸಣ್ಣ ಕರಿಯಮ್ಮ ದೇವಿಯವರಿಂದ ವೈಕುಂಠ ಮಂಟ ಪಕ್ಕೆ ಆಹ್ವಾನಿಸುವ ಕಾರ್ಯಕ್ರಮ.
7 ರಂದು ಬೆಳಗ್ಗೆ 8ರಿಂದ ಸ್ವಾಮಿ ಸನ್ನಿಧಿ ಮತ್ತು ಎಲ್ಲ ದೇವರುಗಳ ಸಮ್ಮುಖದಲ್ಲಿ ಮಹಾ ಮಂಗಳಾರತಿ,ಹೋಮ ನೆರವೇರಿದ ಬಳಿಕ ಶ್ರೀ ಸ್ವಾ ಮಿ ಹೂವಿನ ಹಾರವನ್ನು ಹರಾಜು ಮಾಡಲಾಗುತ್ತದೆ. ಬೆಳಗ್ಗೆ 10.30 ರಿಂದ 11 ಗಂಟೆಗೆ ವೈಕುಂಠ ಮಂಟಪದಲ್ಲಿ ಅನ್ನದಕೋಟೆ ಕಾರ್ಯ ಕ್ರ ಮ ಮತ್ತು ಆಹ್ವಾನಿತ ದೇವರುಗಳಿಗೆ ನೈವೇದ್ಯ ಮತ್ತು ಮಹಾಮಂಗಳಾರತಿ ಪ್ರಸಾದ ವಿನಿಯೋಗ ಜರುಗಲಿದೆ.
8 ರಂದು ಸಂಜೆ 4 ಗಂಟೆಗೆ ಅನ್ನದ ಕೋಟೆ ಮಂಟಪದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಮತ್ತು ಗ್ರಾಮದೇವತೆ ಕರಿಯಮ್ಮ ದೇವರುಗಳಿಗೆ ಗ್ರಾ ಮಸ್ಥರು ಹಾಗೂ ಸಾರ್ವಜನಿಕರಿಂದ ಮಹಾಪೂಜೆ ಹಾಗೂ ಪಟ್ಟದ ದಾಸಯ್ಯ ಮತ್ತಿತರರಿಗೆ ಗೌರವ ಸಮರ್ಪಣೆ ಜರುಗಲಿದೆ. 6 ರಂದು ಸಂಜೆ 4 ಗಂಟೆಯಿಂದ ರಾತ್ರಿ 10ರವರೆಗೆ ಭಕ್ತರಿಗೆ ಊಟದ ವ್ಯವಸ್ಥೆ ಇರುತ್ತದೆ. 7ರಂದು ಬೆಳಗ್ಗೆ 7 ಗಂಟೆಗೆ ಲಘು ಉಪಹಾರ,ಮಧ್ಯಾಹ್ನ 1ರ ನಂತರ ನಿರಂತರ ಊಟದ ವ್ಯವಸ್ಥೆ ಇರುತ್ತದೆ.