ಇಂದಿನಿಂದ ಶ್ರೀ ಕಲ್ಲೇಶ್ವರ ದೇವಸ್ಥಾನ,ಉದ್ಘಾಟನೆ,ಪ್ರತಿಷ್ಠಾಪನೆ ಕಾರ‌್ಯ

CTD 31 SRI KALLESHAVAR SWAMI-03
Published on

ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಲಕ್ಷ್ಮೀಸಾಗರದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನ ಸಮಿತಿ,ಗ್ರಾಮದಲ್ಲಿ ಫೆ.1ರಿಂದ 2 ದಿನಗಳ ಕಾಲ ನೂತನ ಶ್ರೀ ಕಲ್ಲೇಶ್ವರ ದೇವಸ್ಥಾನ,ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭ ಹಮ್ಮಿಕೊಂಡಿದೆ. 1ರಂದು ಸಂಜೆ 4.30ಕ್ಕೆ ಕಲಾ ತಂಡಗಳೊಂದಿಗೆ ಶ್ರೀ ಕಲ್ಲೇಶ್ವರ ಸ್ವಾಮಿ ನೂತನ ವಿಗ್ರಹದ ಮೆರವಣಿಗೆ ನಡೆಯಲಿದೆ.

ಸಂಜೆ 7ಕ್ಕೆ ಶ್ರೀ ಪುಟ್ಟಸ್ವಾಮೀಜಿ ಹಾಗೂ ಶ್ರೀ ರೇವಣ ಸಿದ್ದಯ್ಯ ಶಾಸ್ತ್ರಿಗಳ ನೇತೃತ್ವದಲ್ಲಿ ನಾನಾ ಧಾರ್ಮಿಕ ವಿಧಿಗಳು ನೆರವೇರಲಿವೆ. 2 ರಂ ದು ಬೆಳಗ್ಗೆ 9.15ಕ್ಕೆ ಜಗಳೂರು ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ‌್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೂತನ ವಿಗ್ರಹ ಪ್ರತಿ ಷ್ಠಾನೆ,ಕಳಸಾರೋಹಣ ನೆರವೇರಲಿದೆ. ಅನ್ನ ಸಂತರ್ಪಣೆ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net