ಅಮ್ಮಿನಬಾವಿಯಲ್ಲಿ ಶ್ರೀ ಜಿನವಾಣಿ ಮಾತಾಜಿ ಚಾತುರ್ಮಾಸ

30 DWD 3 Shree Jinavani mataji
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜೈನ ಧರ್ಮದ ಮಹಾತಪಸ್ವಿನಿ ಗಣಿನಿ ಆರ್ಯಿಕಾರತ್ನ 105 ಶ್ರೀ ಜಿನವಾಣಿ ಮಾತಾಜಿ ಅವರ 30ನೇ ಪಾವನ ವರ್ಷಾಯೋಗದ ಚಾತುರ್ಮಾಸ ವ್ರತಾಚರಣೆ 4 ತಿಂಗಳ ಕಾಲ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀ ನೇಮಿನಾಥ ಜಿನಾಲಯದಲ್ಲಿ ಜು. 2ರಿಂದ ಆರಂಭಗೊಳ್ಳಲಿದೆ.

ಮಹಾತಪಸ್ವಿ ಆಯುರ್ವೇದಾಚಾರ್ಯ ಶ್ರೀ 108 ಕುಶಾಗ್ರನಂದಿ ಗುರುದೇವರ ಪರಮ ಶಿಷ್ಯತ್ವ ಹೊಂದಿರುವ ಮಾತಾಜಿ ಅವರು 2007ರಿಂದ ಪ್ರತಿವರ್ಷ ನಿರಂತರವಾಗಿ ಚಾತುರ್ಮಾಸ ವ್ರತಾಚರಣೆ ಮಾಡುತ್ತ ಬಂದಿದ್ದಾರೆ. ಕರ್ನಾಟಕ, ರಾಜಸ್ಥಾನ, ಮಹಾರಾಷ್ಟç, ದೆಹಲಿ, ಮಧ್ಯಪ್ರದೇಶ ಮತ್ತು ಬಿಹಾರದ ವಿವಿಧ ಧರ್ಮಕ್ಷೇತ್ರಗಳಲ್ಲಿ 29 ಚಾತುರ್ಮಾಸ ವ್ರತಾಚರಣೆ ಕೈಗೊಂಡಿದ್ದು, 30ನೆಯ ಚಾತುರ್ಮಾಸ ಅಮ್ಮಿನಬಾವಿಯಲ್ಲಿ ಜರುಗಲಿದೆ.

ಶುಭಾಗಮನ ನಾಳೆ: ಜು. 2ರಂದು ಪ್ರಾತಃಕಾಲ 7 ಗಂಟೆಗೆ ಅಮ್ಮಿನಬಾವಿ ಗ್ರಾಮಕ್ಕೆ ಮಾತಾಜಿ ಅವರ ಶುಭಾಗಮನವಾಗಲಿದೆ. ನಿತ್ಯ ಬೆಳಗಿನ ಜಾವ 3 ಗಂಟೆಯಿ0ದ ಧ್ಯಾನ, ಸ್ವಾಧ್ಯಾಯ, ಯೋಗದೊಂದಿಗೆ ಮಾತಾಜಿ ದಿನಚರಿ ಆರಂಭವಾಗುವುದು. ಸಂಜೆ 6 ಗಂಟೆಯವರೆಗೆ ಶ್ರಾವಕ- ಶ್ರಾವಕಿಯರಿಗೆ ಪೂಜೆ, ಭಜನೆ, ಆರತಿ ಮತ್ತು ತತ್ವಾರ್ಥ ಚಿಂತನೆಯ ಮಾರ್ಗದರ್ಶನ ಮಾಡುವರು. ಪ್ರತಿ ಭಾನುವಾರ ಮಧ್ಯಾಹ್ನ ಮಾತಾಜಿ ಅವರಿಂದ ವಿಶೇಷ ಆಶೀರ್ವಚನ ಜರುಗುವುದು. ಶ್ರಾವಕ- ಶ್ರಾವಕಿಯರು ಚಾತುಮÁðಸ ಧರ್ಮ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಅಮ್ಮಿನಬಾವಿ ದಿಗಂಬರ ಜೈನ ಸಮಾಜ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net