ಶ್ರೀ ಜಯದೇವ ಲೀಲೆ ಪ್ರವಚನ ಇಂದಿನಿಂದ

Sri Jayadeva, Discourse,
Published on

ದಾವಣಗೆರೆ: ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 68ನೇ ವರ್ಷದ ಸ್ಮರಣೋತ್ಸವ ಅಂಗವಾಗಿ ನಗರದ ಶಿವಯೋಗಾಶ್ರಮದಲ್ಲಿ ಸೆ.26ರಿಂದ 29ರ ವರೆಗೆ ಶ್ರೀ ಜಯದೇವ ಲೀಲೆ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪ್ರತಿದಿನ ಸಂಜೆ 6.30ಕ್ಕೆ ಬಸವಪ್ರಭು ಶ್ರೀ ನೇತೃತ್ವದಲ್ಲಿ ಸಂತೇಬೆನ್ನೂರಿನ ಮಹಾಂತೇಶ ಶಾಸ್ತ್ರಿ ಪ್ರವಚನ ನಡೆಸಿಕೊಡಲಿದ್ದಾರೆ. ಸೆ.30ರಂದು ಬೆಳಗ್ಗೆ 10 ಗಂಟೆಗೆ ಜಯದೇವ ಜಗದ್ಗುರುಗಳ ಸ್ಮರಣೋತ್ಸವ ಹಾಗೂ ಸಂಜೆ 4 ಗಂಟೆಗೆ ರಥೋತ್ಸವ ಜರುಗಲಿದೆ.

ಶ್ರೀ ಜಯದೇವ ಜಗದ್ಗುರುಗಳ ಭಕ್ತರು, ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶಿವಯೋಗಾಶ್ರಮ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net