ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ವಾರ್ಷಿಕೋತ್ಸವ

gan-6
Published on

ಗಂಗೊಳ್ಳಿ: ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್, ಲೈಟ್ ಹೌಸ್ ಗಂಗೊಳ್ಳಿ 34ನೇ ವಾರ್ಷಿಕೋತ್ಸವ ಲೈಟ್‌ಹೌಸ್‌ನ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು.

ಜಿ.ಪಂ. ಮಾಜಿ ಸದಸ್ಯ ಸುರೇಶ್ ಬಟವಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಮಟ್ಟದ ಫುಟ್‌ಬಾಲ್ ಆಟಗಾರ ಹಿಮೇಶ್ ಯು.ಕುಮಾರ್ ಮತ್ತು ರಾಜ್ಯಮಟ್ಟದ ಕರಾಟೆ ಪಟು ಅಥರ್ವ್ ಡಿ.ಖಾರ್ವಿ ಅವರನ್ನು ಗೌರವಿಸಲಾಯಿತು.

ತಾ.ಪಂ. ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಅಖಿಲ ಕರ್ನಾಟಕ ಕೊಂಕಣಿ ಖಾರ್ವಿ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಪ್ರಕಾಶ್ ಆರ್. ಖಾರ್ವಿ, ಗಂಗೊಳ್ಳಿ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಖಾರ್ವಿ, ತ್ರಾಸಿ ಗ್ರಾ.ಪಂ. ಅಧ್ಯಕ್ಷ ಮಿಥುನ್ ದೇವಾಡಿಗ, ಉದ್ಯಮಿ ದಿನೇಶ್ ಜೋಗಿ, ಗಂಗೊಳ್ಳಿ ಗ್ರಾ.ಪಂ. ಸದಸ್ಯ ರಾಜೇಂದ್ರ ಶೇರುಗಾರ್, ಮೀನುಗಾರ ಮುಖಂಡರಾದ ಪ್ರಕಾಶ್ ಖಾರ್ವಿ, ಸಂಘದ ಸ್ಥಾಪಕ ಅಧ್ಯಕ್ಷ ಮಡಿ ಮಾಧವ ಖಾರ್ವಿ, ಸಂಘದ ಅಧ್ಯಕ್ಷ ಚಂದ್ರ ಕೆ.ಖಾರ್ವಿ, ಕಾರ್ಯದರ್ಶಿ ಮಡಿ ಚೇತನ ಖಾರ್ವಿ, ಮಹಿಳಾ ಮಂಡಳಿ ಅಧ್ಯಕ್ಷೆ ಜಯಂತಿ ಜಿ.ಖಾರ್ವಿ ಉಪಸ್ಥಿತರಿದ್ದರು. ನಾಗರಾಜ್ ಖಾರ್ವಿ ಸ್ವಾಗತಿಸಿದರು. ಕೇಶವ ಖಾರ್ವಿ ವರದಿ ವಾಚಿಸಿದರು. ಸುಂದರ ಜಿ.ಗಂಗೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net