

ಹುಬ್ಬಳ್ಳಿ : ಹುಬ್ಬಳ್ಳಿ ತಾಲೂಕಿನ ತಿರುಮಲಕೊಪ್ಪದ (ತಡಸ್ ಕ್ರಾಸ್) ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ, ಕಷಿ ಚಿಂತನ ಮಂಥನ ಸಮಾವೇಶ ಮಾ. 30ರಂದು ಸಂಜೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗಲಿದೆ.
ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯರಾದ ಮುಕ್ತಿಮಂದಿರ ೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಸಮಾರಂಭವನ್ನು ಉದ್ಘಾಟಿಸುವರು. ಸಾವಯವ ಕಷಿ ತರಾದ ರಾಯಚೂರು ಜಿಲ್ಲೆ ಕವಿತಾಳದ ಡಾ. ಕವಿತಾ ಮಿಶ್ರಾ ವಿಶೇಷ ಅತಿಥಿಯಾಗಿ ಭಾಗವಹಿಸುವರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉಸ್ತುವಾರಿ ಸಚಿವ ಸಂತೋಷ ಲಾಡ, ಶಾಸಕರಾದ ಎಂ.ಆರ್. ಪಾಟೀಲ, ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಪಿ.ಸಿ. ಸಿದ್ಧನಗೌಡ್ರ, ಮಾಜಿ ಸಂಸದ ಎಂ.ಸಿ. ಕುನ್ನೂರು, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಎಸ್.ಐ.ಚಿಕ್ಕನಗೌಡ್ರ, ಎಂ.ಎಸ್.ಅಕ್ಕಿ, ನಾಗರಾಜ ಛಬ್ಬಿ, ಅರವಿಂದ ಕಟಗಿ, ದ್ರುವ ಜತ್ತಿ, ಮಲ್ಲಿಕಾರ್ಜುನ ಪಾಟೀಲ ಹಾಗೂ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಸುಳ್ಳ ಪಂಚಗಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಸೂಡಿ ಜುಕ್ತಿ ಹಿರೇಮಠದ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ಬ್ಯಾಹಟ್ಟಿ ಮರುಳಸಿದ್ದೇಶ್ವರ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ದಾನಯ್ಯ ದೇವರು ಉಪದೇಶಾಮತ ನೀಡುವರು. ಸಮಾರಂಭಕ್ಕೂ ಮೊದಲು ಶ್ರೀ ಜಗದ್ಗುರು ರೇಣುಕಾಚಾರ್ಯರ ರಥೋತ್ಸವ ನಡೆಯಲಿದೆ.
ಮಾ. 31ರಂದು ಸಂಜೆ ಪಾರ್ವತಿ ರಥೋತ್ಸವ ಮತ್ತು ಕಡುಬಿನ ಕಾಳಗದ ಅಂಗವಾಗಿ ಧರ್ಮಸಭೆ ಜರುಗಲಿದ್ದು, ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಸಾನ್ನಿಧ್ಯ ವಹಿಸುವರು. ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ನೇತತ್ವ ವಹಿಸುವರು. ಶಾಸಕ ಎಂ.ಆರ್.ಪಾಟೀಲ, ಮಾಜಿ ಸಂಸದ ಎಂ.ಸಿ.ಕುನ್ನೂರ, ಅಗಡಿ ಗ್ರಾ.ಪಂ.ಅಧ್ಯೆ ಮಮತಾ ಶರೀ ಜಾಯನ್ನವರ ಹಾಗೂ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಮಾ. 25 ರಿಂದ 29ರ ವರೆಗೆ ನಿತ್ಯ ಸಂಜೆ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದ ದಾನಯ್ಯ ದೇವರಿಂದ ನಡೆಯಲಿದೆ. 29ರಂದು ಸಂಜೆ ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ಮಂಗಲ ಮೂತಿರ್ಗೆ ರುದ್ರಾಭಿಷೇಕ ನಡೆಯಲಿದೆ.
ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಪ್ರಾರಂಭಿಸಿದ್ದು, ಆಸಕ್ತ ಜಂಗಮ ವಟುಗಳು ಶ್ರೀ ಮಠವನ್ನು ಸಂಪಕಿರ್ಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.