

ಹುಬ್ಬಳ್ಳಿ: ಇಲ್ಲಿಯ ಅರವಿಂದನಗರದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಮಂಗಳವಾರ ಶ್ರೀಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಅಂಗವಿಕಲರಾದ ಮಂಜುನಾಥ ನಗರದ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಗುರು ಎಚ್.ಬಿ. ಕೊರವರ, ಬೆಂಗಳೂರಿನ ಆಗೂ ನೀ ಅನಿಕೇತನ ಫೌಂಡೆಷನ್ ಸಂಸ್ಥಾಪಕಿ ಧರಣಿ ಬಿ. ಸಸಿ, ಹೆಸ್ಕಾಂ ನೌಕರ ಹೇಮರೆಡ್ಡಿ ಭೀಮರೆಡ್ಡಿ, ಕವಿತಾ ಮಚ್ಚಾ, ಹೃತಿಕಾ ಶೇರಖಾನೆ ಜಾತ್ರಾಮಹೋತ್ಸವ ಉದ್ಘಾಟಿಸಿದರು.
ಎಚ್.ಬಿ. ಕೊರವರ ಮಾತನಾಡಿ, ಪ್ರತಿಯೊಬ್ಬರಿಗೂ ಭಗವಂತ ಎರಡು ಕೈ ಕೊಟ್ಟಿದ್ದಾನೆ. ಒಂದು ಕೈ ನಮಗೆ ಮತ್ತೊಂದು ಸಮಾಜ ಮತ್ತು ಧರ್ಮಕ್ಕಾಗಿ ಮೀಸಲೀಡಬೇಕು ಎಂದರು.
ಧರಣಿ ಬಿ. ಸಸಿ ಮಾತನಾಡಿ, ಪ್ರತಿಯೊಬ್ಬರೂ ವೈಯಕ್ತಿಕ ಬದುಕಿನ ಜತೆಗೆ ಸ್ವಲ್ಪಾದರೂ ಸಾಮಾಜಿಕ ಕಾರ್ಯ ಮಾಡಬೇಕು ಮತ್ತು ಕೈಲಾಗದವರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎಂದರು.
ಐವರು ಮುತ್ತೈದೆಯರೊಂದಿಗೆ ಧರ್ಮದರ್ಶಿ ಮಾತೋಶ್ರೀ ಡಾ. ಹುಲಿಗೆಮ್ಮ ಪೋಸಾ ಅಮ್ಮನವರು ಶ್ರೀ ದೇವಿಯವರಿಗೆ ಕಂಕಣಧಾರಣೆ ಗೈದರು. ನಮ್ಮ ದೇಶದ ವೀರಯೋಧರಿಗೆ ಆತ್ಮಸ್ಥೈರ್ಯ ಹಾಗೂ ದಿವ್ಯಶಕ್ತಿ ತುಂಬಲು ಮಹಾಮಂಗಳಾರತಿ ನೆರವೇರಿಸಲಾಯಿತು.
ಮೇ 25ರವರೆಗೆ ಲಕ್ಷ್ಮೀ ಶೋಭಾನ, ಲಲಿತ ಸಹಸ್ರ ನಾಮಾವಳಿ ಪಠಣ, ಶ್ರೀ ದುರ್ಗಾ ಸಪ್ತಶತಿ ಪಾರಾಯಣ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ಪ್ರಮುಖರಾದ ತೋಟಪ್ಪ ನಿಡಗುಂದಿ, ಮಹೇಶ ದಾಬಡೆ, ಉಮೇಶ ಸುಂಕದ ಭಟ್ರು, ಅನಿತಾ ಬಾಣದ, ಶಾಂತಾ ಗಡಾದ, ಗೀತಾ ಅಶೋಕ ವಾಲ್ಮೀಕಿ, ಆಶಾ ರಜಪೂತ, ಪದ್ಮಾ ದಿವಟೆ, ವಿಜಯಾ ರಾಯಬಾಗಿ, ಶಾರದಾ ಅರಗಂಜಿ, ಶೋಭಾ ಬುರ್ಲಿ, ಶೈಲಾ ಹಳ್ಳಿಕೇರಿ, ರಾಧಾ ಖಂಡಾಟೆ, ಲತಾ ಹಳ್ಳಿಕೇರಿ, ಸಾವಿತ್ರಿ ಕೊಪ್ಪರ, ಯೋಗಿಣಿ ಶೆಲ್ಲಿಕೇರಿ ಇತರರು ಇದ್ದರು.