ದೀಪಗಳಿಂದ ಕಂಗೊಳಿಸಿದ ಶ್ರೀ ಹೇಮಗಿರಿಮಠ

Sri Hemagiri Math decorated with lights
Published on

ಗುತ್ತಲ: ಜಿಲ್ಲೆಯ ಪ್ರಸಿದ್ಧ ಧಾರ್ವಿುಕ ಪುಣ್ಯ ಕ್ಷೇತ್ರ ಪಟ್ಟಣದ ಶ್ರೀ ಗುರು ಪಟ್ಟದ ಹೇಮಗಿರಿ ಚನ್ನಬಸವೇಶ್ವರರ ಮಠದ ಮಹಾ ಕಾರ್ತಿಕೋತ್ಸವ ಸೋಮವಾರ ರಾತ್ರಿ ವೈಭವದಿಂದ ಜರುಗಿತು.

ಕಾರ್ತಿಕೋತ್ಸವದ ಅಂಗವಾಗಿ ಮಠದಿಂದ ಪಟ್ಟಣದ ಬಸ್ ನಿಲ್ದಾಣ, ಅಂಗ್ಲಾಪುರ ಓಣಿ, ಪಂಚಾಯಿತಿ ಹಾಗೂ ಪೇಟೆಯವರೆಗೂ ರಸ್ತೆಗಳ ಇಕ್ಕೆಲಗಳಲ್ಲಿ ಸಾಲು ಸಾಲು ದೀಪಗಳನ್ನು ಪೂಜೆ ವೇಳೆ ನೆರೆದ ಸಹಸ್ರಾರು ಭಕ್ತರು ಭಕ್ತಿಯಿಂದ ಹಚ್ಚಿದರು.

ಮಠದ ಎದುರುಗಡೆ ಇರುವ ಕಲ್ಯಾಣ ಮಂಟಪದಲ್ಲಿ ತಿರುಗುತ್ತಿದ್ದ 508 ದೀಪಗಳನ್ನು ಹೊಂದಿರುವ ದೀಪದ ಸ್ತಂಭ ದೃಶ್ಯ ಎಲ್ಲರ ಗಮನ ಸೆಳೆಯಿತು. ಅತ್ಯಾಕರ್ಷಕ ನೂರಾರು ಹಣತೆಗಳು ಎಲ್ಲರ ಆರ್ಕಷಣೆಯಾಗಿದ್ದವು. ಸಾಲಕೃಂತ ದೀಪಗಳು ಎಲ್ಲರ ಗಮನ ಸೆಳೆದವು. ಶ್ರೀಮಠದ ನಗಾರಿ ಖಾನಿ ದೀಪಗಳಿಂದ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ದೃಶ್ಯ ಎಲ್ಲರನ್ನು ಆಕರ್ಷಿಸಿತು.

ಭಕ್ತರು ಸಾಲು ದೀಪ, ಹಣತೆಗಳನ್ನು ಹಚ್ಚುತ್ತಿದ್ದಂತೆ ಎಲ್ಲೆಡೆ ಹರ ಹರ ಮಹಾದೇವ... ಜೈಘೊಷ ಮುಗಿಲು ಮುಟ್ಟಿತ್ತು. ಮಹಾ ಕಾರ್ತಿಕೋತ್ಸವಕ್ಕೆ ಜಿಲ್ಲೆ ಅಲ್ಲದೆ, ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿದ್ದರು. ಮಹಾ ಕಾರ್ತಿಕೋತ್ಸವದ ಅಂಗವಾಗಿ ಮಧ್ಯಾಹ್ನ ಮಠದ ಪೂಜೆಯ ನಂತರ ಹೇಮಗಿರಿ ಕಲ್ಯಾಣ ಮಂಟಪದ ನೂತನ ನಿವೇಶನದಲ್ಲಿ ನಿರಂತರ ಅನ್ನ ಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net