ಶ್ರೀ ಹಳವೀರ ಬಸವೇಶ್ವರ ರಥೋತ್ಸವ

TEMPLE
ಸವಣೂರ ತಾಲೂಕು ಬಸವನಕೊಪ್ಪ ಗ್ರಾಮದ ಶ್ರೀಹಳವೀರ ಬಸವೇಶ್ವರ ದೇವಸ್ಥಾನ.
Published on

ಸವಣೂರ: ತಾಲೂಕಿನ ಬಸವನಕೊಪ್ಪ ಗ್ರಾಮದ ಶ್ರೀ ಹಳವೀರ ಬಸವೇಶ್ವರ ಜಾತ್ರಾ ಮಹೋತ್ಸವ ಜೂ. 17 ಹಾಗೂ 18 ರಂದು ಜರುಗಲಿದೆ. ಜೂ. 17 ರಂದು ಪ್ರಾತಃಕಾಲ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯ ಜರುಗಲಿವೆ.

ಶ್ರೀ ಮುರಗಯ್ಯ ಹಿರೇಮಠ, ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ಹಾಗೂ ಹತ್ತಿಮತ್ತೂರ ವಿರಕ್ತಮಠದ ಶ್ರೀ ನಿಜಗುಣ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಜೆ ರಥೋತ್ಸವ ಜರುಗವುದು.

ಜೂ. 18 ರಂದು ಪ್ರಾತಃಕಾಲ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದ್ದು ಸಂಜೆ ಕಡುಬಿನ ಕಾಳಗ, ನಂತರ ಧರ್ಮ ಸಭೆ ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net