ಶ್ರೀ ಗುರುಸಿದ್ಧೇಶ್ವರ ರಥೋತ್ಸವ ಸಂಭ್ರಮ

h2-3000 Math 1
Published on

ಹುಬ್ಬಳ್ಳಿ: ಶ್ರಾವಣ ಕೊನೆಯ ಸೋಮವಾರ ಇಲ್ಲಿಯ ಮೂರುಸಾವಿರ ಮಠ ಮಹಾಸಂಸ್ಥಾನದ ಶ್ರೀ ಗುರುಸಿದ್ಧೇಶ್ವರ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.

ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಚೇರ್ಮನ್ ಅರವಿಂದ ಕುಬಸದ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ಜೈಕಾರದೊಂದಿಗೆ ಶ್ರೀಮಠದ ಆವರಣದಿಂದ ಹೊರಟ ರಥವು, ಸೊರಬದಮಠ ಗಲ್ಲಿಯವರೆಗೆ ಸಾಗಿ ಮರಳಿ ಶ್ರೀಮಠ ತಲುಪಿತು. ಸೇರಿದ್ದ ಸಹಸ್ರಾರು ಭಕ್ತರು, ದಾರಿಯುದ್ದಕ್ಕೂ ಗುರುಸಿದ್ಧೇಶ್ವರಗೆ ಜಯಕಾರ ಮೊಳಗಿಸಿದರು. ವಿವಿಧ ವಾದ್ಯ-ಮೇಳಗಳು ಸಂಭ್ರಮವನ್ನು ಇಮ್ಮಡಿಗೊಳಿಸಿದವು. ರಥವು ಮಠದ ಆವರಣ ತಲುಪಿದ ನಂತರ ಶ್ರೀಮಠದ ಆವರಣದಲ್ಲಿ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಿಂಹಾಸನಾರೂಢರಾಗಿ, ಭಕ್ತರಿಗೆ ಆಶೀರ್ವಾದ ನೀಡಿದರು.

ಬೆಳಗ್ಗೆ ಮಠದಲ್ಲಿ ಕೃರ್ತೃ ಗದ್ದುಗೆಗೆ ರುದ್ರಾಭಿಷೇಕ ಸೇರಿದಂತೆ ಪೂಜಾ ಕೈಂಕರ್ಯಗಳು ನೆರವೇರಿದವು. ಸಂಜೆ ವೇಳೆ ಪಲ್ಲಕ್ಕಿ ಮೆರವಣಿಗೆಯು ಶ್ರೀಮಠದಿಂದ ಹೊರಟು ಓಲೆಮಠ ತಲುಪಿ ಮರಳಿತು. ನಂತರ ರಥೋತ್ಸವ ಜರುಗಿತು.

ಶಾಸಕ ಮಹೇಶ ಟೆಂಗಿನಕಾಯಿ, ರಾಜಣ್ಣ ಕೊರವಿ, ಲಿಂಗರಾಜ ಪಾಟೀಲ, ಚನ್ನಬಸಪ್ಪ ಧಾರವಾಡಶೆಟ್ಟರ್, ಅಮರೇಶ ಹಿಪ್ಪರಗಿ, ವೀರೇಶ ಸಂಗಳದ, ಸದಾಶಿವ ಚೌಶೆಟ್ಟಿ, ಮೋಹನ ಅಸುಂಡಿ, ವಿಜಯ ಶೆಟ್ಟರ್, ಮಂಜುನಾಥ ಮುನವಳ್ಳಿ, ಮಲ್ಲಿಕಾರ್ಜುನ ಕಳಸರಾಯ, ವೀರಣ್ಣ ಕಲ್ಲೂರ, ಸದಾನಂದ ಡಂಗನವರ, ಶಿವು ಮೆಣಸಿನಕಾಯಿ, ಸುಭಾಷಸಿಂಗ್ ಜಮಾದಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net