

ಹುಬ್ಬಳ್ಳಿ: ಶ್ರಾವಣ ಕೊನೆಯ ಸೋಮವಾರ ಇಲ್ಲಿಯ ಮೂರುಸಾವಿರ ಮಠ ಮಹಾಸಂಸ್ಥಾನದ ಶ್ರೀ ಗುರುಸಿದ್ಧೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ರಥೋತ್ಸವಕ್ಕೆ ಚಾಲನೆ ನೀಡಿದರು. ಜೈಕಾರದೊಂದಿಗೆ ಶ್ರೀಮಠದ ಆವರಣದಿಂದ ಹೊರಟ ರಥವು, ಸೊರಬದಮಠ ಗಲ್ಲಿಯವರೆಗೆ ಸಾಗಿ ಮರಳಿ ಶ್ರೀಮಠ ತಲುಪಿತು. ಸೇರಿದ್ದ ಸಹಸ್ರಾರು ಭಕ್ತರು, ದಾರಿಯುದ್ದಕ್ಕೂ ಗುರುಸಿದ್ಧೇಶ್ವರಗೆ ಜಯಕಾರ ಮೊಳಗಿಸಿದರು. ವಿವಿಧ ವಾದ್ಯ-ಮೇಳಗಳು ಸಂಭ್ರಮವನ್ನು ಇಮ್ಮಡಿಗೊಳಿಸಿದವು. ರಥವು ಮಠದ ಆವರಣ ತಲುಪಿದ ನಂತರ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಸಿಂಹಾಸನಾರೂಢರಾದರು.