ಶೇ. 10ರಷ್ಟು ಡಿವಿಡೆಂಡ್ ನೀಡಿದ ಶ್ರೀ ಗುರುಸಿದ್ಧೇಶ್ವರ ಬ್ಯಾಂಕ್

New Gurusidda bank New
Published on

ಹುಬ್ಬಳ್ಳಿ : ಹುಬ್ಬಳ್ಳಿಯ ಶ್ರೀ ಗುರುಸಿದ್ಧೇಶ್ವರ ಬ್ಯಾಂಕ್ ಕಳೆದ ಆರು ವರ್ಷಗಳಿಂದ ಶೆ. 10ರಷ್ಟು ಡಿವಿಡೆಂಡ್ ನೀಡುತ್ತಿದೆ.

ಸೋಮವಾರ ನಡೆದ ಇಲ್ಲಿನ ಶ್ರೀ ಗುರುಸಿದ್ಧೇಶ್ವರ ಬ್ಯಾಂಕಿನ 46 ನೇ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕ್ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಈ ವಿವರ ನೀಡಿದರು.

2024- 2025 ನೇ ಸಾಲಿನ ವಾರ್ಷಿಕ ವರದಿಯನ್ನು ಮತ್ತು ಪ್ರಸಕ್ತ ವರ್ಷದ ವಿಷಯಗಳನ್ನು ಮಹಾಸಭೆಗೆ ಮಂಡಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಬ್ಯಾಂಕಿನ ಸದಸ್ಯರ ಮಕ್ಕಳು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದರೆ 5 ಸಾವಿರ ರೂ., ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದರೆ 7,500 ರೂ. ಮತ್ತು ಯಾವುದೇ ಪದವಿಯಲ್ಲಿ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ 10 ಸಾವಿರ ರೂ. ಪ್ರತಿಭಾ ಪುರಸ್ಕಾರ ನೀಡಬೇಕೆಂದು ಬ್ಯಾಂಕಿನ ಆಡಳಿತ ಮಂಡಳಿಯವರು ನಿರ್ಣಯಿಸಿದ್ದಾರೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಬ್ಯಾಂಕಿನ ವಹಿವಾಟು ಉತ್ತಮವಾಗಿದೆ. ಈ ಬ್ಯಾಂಕಿನಿಂದ ಸಾಲ ಪಡೆದುಕೊಂಡ ಸಾಲಗಾರರು ಸದುಪಯೋಗ ಪಡೆಸಿಕೊಂಡು ಸರಿಯಾಗಿ ಮರುಪಾವತಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಬ್ಯಾಂಕಿನ ಎನ್​ಪಿಎ ಪ್ರಮಾಣವು ಶೇ. 95ರಷ್ಥು ಹೆಚ್ಚಿಗೆ ಇದ್ದದ್ದನ್ನು ಬ್ಯಾಂಕಿನ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಅವರ ನೇತುೃತ್ವದಲ್ಲಿ ಎನ್​ಪಿಎ ಶೇ. 13 ರಷ್ಥು ಕಡಿಮೆ ಮಾಡಲಾಗಿದೆ. ಇದಕ್ಕೆ ಭಾರತೀಯ ರಿಜರ್ವ್ ಬ್ಯಾಂಕಿನವರು ಶಿಫಾರಸು ಮಾಡಿದ್ದರು ಎಂದರು.

ಬ್ಯಾಂಕಿನ ಉಪಾಧ್ಯಕ್ಷ ಅರವಿಂದ ಲಿಂಬಿಕಾಯಿ, ಆಡಳಿತ ಮಂಡಳಿ ನಿರ್ದೇಶಕರಾದ ವೀರಣ್ಣ ಕಲ್ಲೂರ, ಎಫ್.ಸಿ . ಭೂಸದ, ಮಾರುತಿ ಜಾಧವ, ಶಾಸಕ ಮಹೇಶ ಟೆಂಗಿನಕಾಯಿ, ವಿಜಯಾನಂದ ಹೊಸಕೋಟಿ, ಲಕ್ಷ್ಮೀಕಾಂತ ಪಾಟೀಲ, ಪ್ರೇಮಾ ಆರಟ್ಟಿ, ಗೀತಾ ಮುಳ್ಳಳ್ಳಿ, ಮಂಜುನಾಥ ಮುನವಳ್ಳಿ, ಉಮೇಶ ಅಪ್ಪೋಜಿ, ರಾಜಣ್ಣ ಬತ್ಲಿ, ಬಸವರಾಜ ಚೆನ್ನಿ, ನ್ಯಾಯವಾದಿ ಗುರು ಹಿರೇಮಠ ಉಪಸ್ಥಿತರಿದ್ದರು.</p><p>ಬ್ಯಾಂಕಿನ ಮುಖ್ಯಕಾರ್ಯ ನಿರ್ವಾಹಣಾ ಅಧಿಕಾರಿ ಜಗದೀಶ ಕಮಡೊಳ್ಳಿಶೆಟ್ಟರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net