ಶ್ರೀ ಗುರುನಾಥಾರೂಢ ಸ್ವಾಮಿಗಳ ಪುಣ್ಯಾರಾಧನೆ

gurunathswamij_resize
Published on

ಹುಬ್ಬಳ್ಳಿ: ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಶ್ರೀ ಗುರುನಾಥಾರೂಢ ಸ್ವಾಮಿಗಳ 62ನೇ ಪುಣ್ಯಾರಾಧನೆ ಕಾರ್ಯಕ್ರಮವು ಏರ್ಪಾಟಾಗಿದೆ.
ಮೇ 16ರಂದು ಬೆಳಗ್ಗೆ ಉಭಯ ಶ್ರೀಗಳ ಮೂರ್ತಿಗಳಿಗೆ ಅಭಿಷೇಕದ ಪೂಜೆ, 9ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಮಹಾತ್ಮರು, ಪೂಜ್ಯರಿಂದ ಪ್ರವಚನ, 18ರಂದು ಮಧ್ಯಾಹ್ನ 12ಕ್ಕೆ ಶ್ರೀಗಳ ಪಲ್ಲಕ್ಕಿ ಉತ್ಸವ ನಗರದಲ್ಲಿ ಸಂಚರಿಸಿ ಸಂಜೆ 5ಕ್ಕೆ ಶ್ರೀಮಠಕ್ಕೆ ತಲುಪಲಿದೆ. ನಂತರ ಕೈಲಾಸ ಮಂಟಪದ ಪೂಜೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ ಎಂದು ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net