ಶ್ರೀ ಗುರುಚರಿತ್ರೆ ಪಾರಾಯಣ ಆರಂಭ

9 Dwd 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶ್ರೀ ದತ್ತ ಜಯಂತಿ ಅಂಗವಾಗಿ 7 ದಿನಗಳ ಗುರುಚರಿತ್ರೆ ಪಾರಾಯಣವು ನಗರದ ಗಾಂಽಚೌಕ್‌ನ ದತ್ತಾತ್ರೇಯ ದೇವಸ್ಥಾನದಲ್ಲಿ ಡಿ. 7ರಿಂದ ಆರಂಭವಾಗಿದ್ದು, 15ರವರೆಗೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ ಕಾಖಡಾರತಿ, ಅಲಂಕಾರ ಪೂಜೆ, ಸಂಜೆ 5ರಿಂದ 6ರವರೆಗೆ ಭಜನೆ, ಸಂಜೆ 6ರಿಂದ ನಾಗಲಕ್ಷಿ÷್ಮÃ ಮೈಸೂರು ಅವರಿಂದ ಹರಿಕೀರ್ತನೆ ನಡೆಯಲಿದೆ.

ದತ್ತಾತ್ರೆಯ ದೇವಸ್ಥಾನದ ಅಧ್ಯಕ್ಷ ಪ್ರಕಾಶ ದೇಸಾಯಿ ಗುರುಚರಿತ್ರೆ ಪಾರಾಯಣ ಉದ್ಘಾಟಿಸಿದರು. ಶಂಕರ ಕುಲಕರ್ಣಿ ದತ್ತಾತ್ರೇಯ ಸ್ತೋತ್ರ ಹೇಳಿದರು. ಅನಂತ ಗೋಡಖಿಂಡಿ ದತ್ತಾತ್ತೇಯ ದೇವರಿಗೆ ಪೂಜೆ ಸಲ್ಲಿಸಿ ಪಾರಾಯಣಕಾರರಿಗೆ ಸಂಕಲ್ಪ ಮಾಡಿಸಿದರು. ಉಪಾಧ್ಯಕ್ಷ ಕೆ.ಜಿ. ಪಾಟೀಲ ವಂದಿಸಿದರು.

ಸೋಮವಾರ ಗುರುಚರಿತ್ರೆ ಪಾರಾಯಣ, ಮಹಾಗಣಪತಿ ಹೋಮ, ಮಹಾಮಂಗಳಾರತಿ ನಡೆಯಿತು. 10ರಂದು ಪವಮಾನ ಹೋಮ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನಡೆಯಲಿದೆ. 11ರಂದು ಬೆಳಗ್ಗೆ 8 ಗಂಟೆಗೆ ರುದ್ರಸ್ವಾಹಾಕಾರ ಹೋಮ, ಸಂಜೆ 5ಕ್ಕೆ ಭಜನೆ, 12ರಂದು ಬೆಳಗ್ಗೆ 9 ಗಂಟೆಗೆ ಧನ್ವಂತರಿ ಹೋಮ, ಸಂಜೆ 5 ಗಂಟೆಗೆ ಅದಿತಿ ಗುರುರಾಜ ಜೋಶಿ ಅವರಿಂದ ಭರತನಾಟ್ಯ, ಮಹಿಳಾ ಮಂಡಳಗಳಿAದ ಭಜನೆ, 13ರಂದು ಬೆಳಗ್ಗೆ 9ಕ್ಕೆ ಶ್ರೀ ಅನ್ನಪೂರ್ಣೇಶ್ವರಿ ಹೋಮ ನಡೆಯಲಿದೆ. 14ರಂದು ಬೆಳಗ್ಗೆ 7 ಗಂಟೆಗೆ ಅಖಂಡ ದಿಗಂಬರ ನಾಮಸಪ್ತಾಹ ಸಮಾಪ್ತಿ, 9 ಗಂಟೆಗೆ ದತ್ತ ಯಾಗ, ಸಂಜೆ 6.10ಕ್ಕೆ ಶ್ರೀ ದತ್ತ ಮಹಾರಾಜರ ತೊಟ್ಟಿಲೋತ್ಸವ, ನಂತರ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ. 15ರಂದು ಬೆಳಗ್ಗೆ 9ಕ್ಕೆ ಶ್ರೀ ಗುರುಚರಿತ್ರೆ ಪಾರಾಯಣ ಮಂಗಲ ಹಾಗೂ ಆಶೀರ್ವಚನ ನಡೆಯಲಿದೆ. ಮಧ್ಯಾಹ್ನ ಮಹಾಮಂಗಳಾರತಿ, ಮಹಾಪ್ರಸಾದ, ಸಂಜೆ 7 ಗಂಟೆಗೆ ಅಷ್ಟಾವಧಾನ ಸಹಿತ ಪಲ್ಲಕ್ಕಿ ಸೇವೆ ನಡೆಯಲಿದೆ ಎಂದು ಕಾರ್ಯದರ್ಶಿ ರವಿ ನರಗುಂದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net