

ಮುಂಡರಗಿ: ತಾಲೂಕಿನ ಕಲಕೇರಿ- ವಿರೂಪಾಪುರ ಗ್ರಾಮದ ಶ್ರೀ ಗುರು ಮುದುಕೇಶ್ವರ ಜಾತ್ರಾ ಮಹೋತ್ಸವ ಭಾನುವಾರ ಆರಂಭಗೊಂಡಿದ್ದು ಮಾ. 2ರವರೆಗೆ ಮುಂದುವರಿಯಲಿದೆ.
26ರಂದು ಶಿವದೀಕ್ಷಾ ಕಾರ್ಯಕ್ರಮ ಹಾಗೂ ಲಿಂಗಾಧಾರಣೆ ನಡೆಯಲಿದೆ. 27ರಂದು ಸಂಜೆ 5.30ಕ್ಕೆ ರಥೋತ್ಸವ ನೆರವೇರುವುದು. ಸಂಜೆ 6.30ಕ್ಕೆ ಶಿವಾನುಭವ ಕಾರ್ಯಕ್ರಮದಲ್ಲಿ ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳು ಸಾನ್ನಿಧ್ಯ ವಹಿಸುವರು. ಶ್ರೀ ಗುರು ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಶ್ರೀ ಬಸವರಾಜ ಸ್ವಾಮೀಜಿ, ಶ್ರೀ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಗುರುಪದೇಶ ನೀಡುವರು. ಡಾ. ವೀರೇಶ ಹಂಚಿನಾಳ ಅವರಿಗೆ ಗುರುರಕ್ಷೆ ನಡೆಯುವುದು. ಶ್ರೀ ದಿಂಗಾಲೇಶ್ವರ ಶಾಸ್ತ್ರಿ ಉಪನ್ಯಾಸ ನೀಡಲಿದ್ದಾರೆ. 28ರಂದು ಸಂಜೆ 5.30ಕ್ಕೆ ಕಡುಬಿನ ಕಾಳಗ, 6.30ಕ್ಕೆ ಧರ್ಮಸಭೆ ನಡೆಯುವುದು. ಶ್ರೀ ಗುರು ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶ್ರೀ ಅಭಿನವ ಸಿದ್ಧವೀರೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪದೇಶ ನೀಡುವರು. ಕಾರ್ಯಕ್ರಮದಲ್ಲಿ ಶ್ರೀ ಗುರು ಮುದುಕೇಶ್ವರ ಶಿವಾಚಾರ್ಯರ ತುಲಾಭಾರ ಸೇವೆ ನಡೆಯುವುದು. ಶಾಸಕ ಡಾ. ಚಂದ್ರು ಲಮಾಣಿ, ಡಾ.ಜಿ.ಬಿ. ಬೀಡನಾಳ ಹಾಗೂ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಅವರಿಗೆ ಗುರುರಕ್ಷೆ ನಡೆಯಲಿದೆ. ಮಾ. 1 ಮತ್ತು 2ರಂದು ಸಂಜೆ 4 ಗಂಟೆಗೆ ಜಂಗಿ ಕುಸ್ತಿ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.