ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಹೆಸರಲ್ಲಿ ಹಣ ವಸೂಲಿ: ಭಕ್ತರು ಎಚ್ಚರದಿಂದ ಇರಲು ಶ್ರೀಮಠ ಮನವಿ

Kotturu Basaveshwara Swamy Temple
Published on

ಕೊಟ್ಟೂರು: ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಹೆಸರಿನಲ್ಲಿ ಕೆಲವರು ಭಕ್ತರಿಂದ ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹವರು ಕಂಡುಬಂದರೆ ಸಮೀಪದ ಪೊಲೀಸ್ ಠಾಣೆಗೆ ದೂರು ದಾಖಲಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಂ.ಎಚ್.ಪ್ರಕಾಶ ರಾವ್, ಶ್ರೀಮಠದ ಪ್ರಧಾನ ಧರ್ಮಕರ್ತ ಸಿಎಚ್‌ಎಂ ಗಂಗಾಧರಯ್ಯ ತಿಳಿಸಿದ್ದಾರೆ.

ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ಹೆಸರಿನಲ್ಲಿ ಮಠದಿಂದ ಯಾವುದೇ ಅನಾಥ ಆಶ್ರಮ ತೆರದಿರುವುದಿಲ್ಲ. ಆದರೆ, ಕೆಲವರು ಶ್ರೀಮಠದ ಹೆಸರು ಹೇಳಿಕೊಂಡು ಭಕ್ತರಿಂದ ಹಣವಸೂಲಿ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಭಕ್ತರು ಎಚ್ಚರದಿಂದಿರಬೇಕು. ಅಂತಹವರು ಬಂದರೆ 08391 226001 ಮತ್ತು 9449020234 ಕರೆ ಮಾಡಿ ತಿಳಿಸಬೇಕು. ಇಲ್ಲವೆ ಸಮೀಪದ ಪೊಲೀಸ್ ಠಾಣೆಗೆ ದೂರು ಸಲ್ಲಿಸಬಹುದು ಎಂದು ಜಂಟಿ ಹೇಳಿಕೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net