

ನರೇಗಲ್ಲ: ನಾವು ಬೇಡಿದ್ದನ್ನು ನೀಡುವ ದತ್ತಾತ್ರೇಯ ದೇವರನ್ನು ಅನನ್ಯ ಭಾವದಿಂದ ಪೂಜಿಸಿದರೆ ನಮ್ಮ ಇಷ್ಟಗಳು ನೆರವೇರುತ್ತವೆ ಎಂದು ನರೇಗಲ್ಲನ ಶ್ರೀ ದತ್ತಾತ್ರೇಯ ದೇವಸ್ಥಾನದ ಅರ್ಚಕ ವಲ್ಲಭ ಭಟ್ಟ ಸದರಜೋಶಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶನಿವಾರ ಶ್ರೀ ದತ್ತ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿತ್ಯವೂ ಯಾರು ಶ್ರೀ ಗುರು ಚರಿತ್ರೆ ಪಠಿಸುತ್ತಾರೆಯೋ ಅವರ ಸಂಕಷ್ಟ ದೂರವಾಗುತ್ತವೆ. ಬ್ರಹ್ಮ, ವಿಷ್ಣು, ಮಹೇಶ್ವರರು ಒಟ್ಟಾಗಿರುವ ಅವತಾರವೆ ಶ್ರೀ ಗುರು ದತ್ತಾತ್ರೇಯರದು. ಒಮ್ಮೆ ದತ್ತಾತ್ರೇಯನಿಗೆ ನಾವು ಶರಣು ಹೋದರೆ ಮೂವರಿಗೂ ನಾವು ಶರಣು ಹೋದಂತೆ. ಆದ್ದರಿಂದ ಶ್ರೀಗುರು ದತ್ತಾತ್ರೇಯನ ಪೂಜೆ ನಮಗೆ ಎಲ್ಲವನ್ನೂ ನೀಡುತ್ತದೆ ಎಂದರು.
ಸುಮಂಗಲೆಯರು ಶ್ರೀ ಗುರು ದತ್ತಾತ್ರೇಯನನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡಿದರು. ಎ.ಜಿ. ಕುಲಕರ್ಣಿ, ಶೇಷಗಿರಿ ಕುಲಕರ್ಣಿ, ಆನಂದ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ಆರ್.ಡಿ. ಕುಲಕರ್ಣಿ, ಬಿ.ಎಲ್. ಕುಲಕರ್ಣಿ, ಅಜಿತ ಕುಲಕರ್ಣಿ, ಸುಹಾಸ ಕುಲಕರ್ಣಿ, ಪ್ರಕಾಶ ಕಾಳೆ, ಆರ್.ಡಿ. ಕುಲಕರ್ಣಿ, ಗಿರೀಶ ಕುಲಕರ್ಣಿ, ನಾಗರಾಜ ನಾಡಿಗೇರ, ನಾಗೇಶಭಟ್ಟ ಗ್ರಾಮಪುರೋಹಿತ, ಪ್ರಕಾಶ ಕಾಳೆ, ಜ್ಯೋತಿ ನಾಡಿಗೇರ, ರೂಪಾ ಗ್ರಾಮಪುರೋಹಿತ, ವಿಮಲಾಬಾಯಿ ಗ್ರಾಮಪುರೋಹಿತ, ಶೋಭಾ ಕುಲಕರ್ಣಿ, ವನಜಾಕ್ಷಿ ಕುಲಕರ್ಣಿ, ಪ್ರತೀಕ್ಷಾ ಕುಲಕರ್ಣಿ, ಶೋಭಾ ಸೂರಭಟ್ಟನವರ, ಶ್ರೇಯಾ ನಾಡಿಗೇರ, ಅರ್ಚನಾ ಕುಲಕರ್ಣಿ, ಲಕ್ಷ್ಮೀ ಗ್ರಾಮಪುರೋಹಿತ, ವಾಣಿ ಕುಲಕರ್ಣಿ, ಪರಿಮಳಾ ಗ್ರಾಮಪುರೋಹಿತ, ಸನ್ಮತಿ ಸದರಜೋಷಿ, ಜಯಶ್ರೀ ಗ್ರಾಮಪುರೋಹಿತ, ಪೂಜಾ ಗ್ರಾಮಪುರೋಹಿತ, ದೀಪಾ ಕುಲಕರ್ಣಿ, ಪ್ರಭಾ ರಾಯಭಟ್ಟನವರ, ಪ್ರಿಯಾ ಕುಲಕರ್ಣಿ, ಅನುಪಮಾ ಗ್ರಾಮಪುರೋಹಿತ ಇದ್ದರು.