ಗುದ್ನೆಪ್ಪನ ಮಠದ ಆಸ್ತಿ ಸರ್ಕಾರದಲ್ಲ

Untitled design (37)
ಶ್ರೀಪ್ರಭುಲಿಂಗ ದೇವರು
Published on

ಕುಕನೂರು: ಶ್ರೀ ಗುದ್ನೆಶ್ವರ ಜಾತ್ರೆಗೆ 800 ವರ್ಷಗಳ ಇತಿಹಾಸವಿದೆ. ಕುಂತಳ ರಾಜನು ಉಂಬಳಿಯಾಗಿ ಕೊಟ್ಟ ಜಾಗವನ್ನು ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ಕಬಳಿಕೆ ಮಾಡುತ್ತಿರುವುದು ಖಂಡನೀಯ. ಮಠದ ಆಸ್ತಿ ಭಕ್ತರದು, ಸರ್ಕಾರದಲ್ಲ ಎಂದು ಮಠದ ಶ್ರೀಪ್ರಭುಲಿಂಗ ದೇವರು ಹೇಳಿದರು. ಮಠದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಠದ ಜಾಗವನ್ನು ವಿವಿಧ ಹಂತಗಳಲ್ಲಿ ಸರ್ಕಾರ ಕಬಳಿಕೆ ಮಾಡುತ್ತಾ ಬಂದಿವೆ. ಮುಜರಾಯಿ ಇಲಾಖೆಯದು ಎಂದು ಹೇಳುತ್ತಾರೆ. ಆದರೆ ಇಂದಿನವರೆಗೂ ಸರ್ಕಾರದಿಂದ ನಯಾಪೈಸಾ ಅನುದಾನ ಪಡೆದಿಲ್ಲ. ಲಿಂಗಾಯತ ವೀರಶೈವ ಧರ್ಮದ ಆಸ್ತಿಗಳ ಮೇಲೆ ಸರ್ಕಾರ ಟಾರ್ಗೆಟ್ ಮಾಡಿದೆ ಎಂದರು. ಮಠದ ಭಕ್ತರಾದ ಗುದ್ನಯ್ಯ ದೂಪದ್, ಗುರುಲಿಂಗಯ್ಯ ಬಂಡಿ, ಚೆನ್ನಬಸಯ್ಯ ಇನಾಮದಾರ, ಶರಣಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net