ಗೋಪಾಲಕೃಷ್ಣ ದೇವರ ಮೂರ್ತಿ ಪುರಪ್ರವೇಶ

New Project (8)
Published on

ಉಪ್ಪಿನಂಗಡಿ: ಬೆಳ್ತಂಗಡಿಯ ತೆಕ್ಕಾರು ದೇವರ ಗುಡ್ಡೆ ಭಟ್ರಬೈಲಿನಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಶ್ರೀ ಗೋಪಾಲಕೃಷ್ಣ ದೇವಾಲಯಕ್ಕೆ ಕಾರ್ಕಳದಲ್ಲಿ ಹೊಯ್ಸಳ ಶೈಲಿಯಲ್ಲಿ ಕೆತ್ತಲ್ಪಟ್ಟ ಶ್ರೀ ಗೋಪಾಲಕೃಷ್ಣ ದೇವರ ಮೂರ್ತಿಯನ್ನು ಭಜನೆ ವಾದ್ಯಗೋಷ್ಠಿಗಳೊಂದಿಗೆ ಪುರಪ್ರವೇಶಗೈಯಲಾಯಿತು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿ ದೇವರ ಮೂರ್ತಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಕ್ ಪುಷ್ಪಾರ್ಚನೆಗೈದು, ಬಳಿಕ ಬನ್ನೆಂಗಳ ಸರಳೀಕಟ್ಟೆ ಮಾರ್ಗವಾಗಿ ತೆಕ್ಕಾರಿಗೆ ತರಲಾಯಿತು.

ಶನಿವಾರ ಬೆಳ್ತಂಗಡಿ ಶಾಸಕರಾದ ಹರೀಶ ಪೂಂಜ, ದೇವಳದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ ಅವರ ಉಪಸ್ಥಿತಿಯಲ್ಲಿ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಲಾಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣ ರಾವ್ ಅರ್ತಿಲ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಸುದರ್ಶನ್, ಪ್ರಮುಖರಾದ ತುಕರಾಮ ನಾಯಕ್, ಲಕ್ಷ್ಮಣ್ ಭಟ್ರಬೈಲ್, ಪ್ರವೀಣ್ ರೈ, ಗಣೇಶ್‌ರಾಜ್, ಅಣ್ಣಿ ಪೂಜಾರಿ, ಶರತ್ ಆನಳಿಕೆ, ಅನಂತ ಪ್ರಸಾದ್, ತುಳಸೀಧರ ಕೋಟ್ಯಾನ್, ಭರತ್ ಬೆನಪು, ಮಂಜುನಾಥ ಸಾಲಿಯಾನ್, ಸತೀಶ್ ಹೊಸಮೊಗ್ರು, ಚಂದ್ರಿಕಾ ಅಣ್ಣಿ ಪೂಜಾರಿ, ಜನಾರ್ದನ ಪೂಜಾರಿ, ರವೀಂದ್ರ ಪಿಲಿಬೈಲು, ಸುರೇಶ್ ಪುಳಿತ್ತಡಿ, ತಿಲಕ್ ವಿದ್ಯಾಪುರ, ಶ್ವೇತಾ ಬಾಗ್ಲೋಡಿ, ವಿದ್ಯಾನಾಯಕ್, ಕೃಷ್ಣ ನಾಯಕ್, ಕೃಷ್ಣ ಐತಾಳ್, ಸಂತೋಷ್ ಕಜೆಕೋಡಿ, ತಿಮ್ಮಪ್ಪ ಪೂಜಾರಿ, ನವೀನ್ ರೈ, ಗುಣಕರ ಅಗ್ನಾಡಿ, ವೆಂಕಟೇಶ್ ರಾವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net