

ಮುಂಡರಗಿ: ಶ್ರೀ ದತ್ತ ಜಯಂತಿ ಪ್ರಯುಕ್ತ ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಭಾನುವಾರ ವಿವಿಧ ಪೂಜೆ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಮಂಗಲಸ್ನಾನ, ಪಂಚಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಭಿಷೇಕ, ಕ್ಷೀರಾಭಿಷೇಕ, ಬಿಲ್ವಾರ್ಚನೆ, ಗರಿಕಾರ್ಚನೆ, ದೂಪಾರ್ಚನೆ, ಸರ್ವಸೇವಾ, ಸಂಕಲ್ಪ ಕಾಯಿ, ಅಲಂಕಾರ, ಲಘು ರುದ್ರಾಭಿಷೇಕ, ಸತ್ಯನಾರಾಯಣ ಪೂಜೆ, ಶ್ರೀ ದತ್ತರ ತೊಟ್ಟಿಲೋತ್ಸವ ಸೇರಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಚಿದಂಬರಭಟ್ ಜೋಶಿ ಹಾಗೂ ಅರ್ಚಕ ಜಯಣ್ಣ ಪಾಶಿ ಪೂಜಾ ಕಾರ್ಯ ನಡೆಸಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಮಂಜುಳಾ ಸಜ್ಜನರ, ಶ್ರೀದೇವಿ ಪೆನಮತ್ಸ, ರಾಜೇಶ್ವರಿ ಪಾಟೀಲ, ಕೈರುನ್ಬೀ ವಡ್ಡಟ್ಟಿ, ಶ್ರೀದೇವಿ ಕೆ, ಪುಷ್ಪಾ ಪಾಟೀಲ, ದ್ಯಾಮವ್ವ ಭೂತರಡ್ಡಿ, ಸಹನಾ ಸಾಸನಮರಿ, ಶ್ರೀದೇವಿ ಉಮಚಗಿ, ಸುಮಿತ್ರಾ ಕಪಟಕರ, ಬಸಮ್ಮ ಕಾಳಿ, ಹೇಮಲತಾ ಚಂದ್ರಶೇಖರ, ದರ್ಶನ ಸಾಸಲಮರಿ, ಇತರರಿದ್ದರು.