ಶ್ರೀ ದುರ್ಗಾಂಬಾ ದೇವಿ ರಥೋತ್ಸವ ಸಂಪನ್ನ

SRI RATHOSTAVA
ಶೃಂಗೇರಿಯಲ್ಲಿ ನಡೆದ ಶ್ರೀ ದುರ್ಗಾಂಬಾ ರಥೋತ್ಸವ.
Published on

ಶೃಂಗೇರಿ: ಶ್ರೀ ದುರ್ಗಾಂಬಾ ದೇವಿಯ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ಗಣಪತಿ ಪೂಜೆ, ಶ್ರೀ ದುರ್ಗಾಂಬೆ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಸುಡು ಬಿಸಿಲನ್ನೂ ಲೆಕ್ಕಿಸದೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಸಾಲಂಕೃತಗೊಂಡ ಶ್ರೀ ದುರ್ಗಾಂಬಾ ದೇವಿಗೆ ಶ್ರದ್ಧಾಭಕ್ತಿಯಿಂದ ಹಣ್ಣು, ಹೂವು ಅರ್ಪಿಸಿದರು. ಉಭಯ ಶ್ರೀಗಳು ಉತ್ಸವದಲ್ಲಿ ಭಾಗಿಯಾಗಿದ್ದರು.

ವಾದ್ಯಘೋಷ್ಠಿಗಳು, ಶ್ರೀಮಠದ ಆನೆಗಳು, ಅಶ್ವಗಳು, ಚೆಂಡೆ ವಾದನ, ರಂಗವಲ್ಲಿ ಚಿತ್ತಾರ, ಛತ್ರಿ-ಚಾಮರ, ತಳಿರು-ತೋರಣ, ಬಣ್ಣಬಣ್ಣದ ಹೂಗಳಿಂದ ಸಾಲಂಕೃತಗೊಂಡ ದೇವಸ್ಥಾನ ಉತ್ಸವಕ್ಕೆ ವಿಶೇಷ ಮೆರುಗು ತಂದಿದ್ದವು.
ಉತ್ಸವದ ಸಲುವಾಗಿ ದೇವಾಲಯಕ್ಕೆ ಹಾಕಲಾದ ವಿದ್ಯುತ್ ದೀಪಗಳ ಅಲಂಕಾರ ನೋಡುಗರ ಗಮನ ಸೆಳೆಯಿತು. ಸಾಲುಸಾಲಾಗಿ ಹಾಕಲಾದ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ರಥೋತ್ಸವ ಸಲುವಾಗಿ ಮೂರು ದಿನ ವಿವಿಧ ಕಾರ್ಯಕ್ರಮಗಳು ನೆರವೇರುತ್ತವೆ.\

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net