ಶ್ರೀ ದ್ರೌಪದಮ್ಮ ಮಲ್ಲಿಗೆ ಹೂವಿನ ಕರಗ ಸಂಪನ್ನ

hoskote
Published on

ಹೊಸಕೋಟೆ: ನಗರದ ಇತಿಹಾಸ ಪ್ರಸಿದ್ಧ ಶ್ರೀ ದ್ರೌಪದಮ್ಮ ದೇವಿ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಸೋಮವಾರ ರಾತ್ರಿ ಸುಮಾರು 1 ಗಂಟೆಗೆ ತಿಗಳರ ಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಪೂರ್ಣಗೊಳಿಸಿ ಹೊರಟ ಕರಗ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಕಿರಣ್​ ಕುಮಾರ್​ ನಾಲ್ಕನೇ ಬಾರಿಗೆ ಕರಗ ಹೊತ್ತಿದ್ದರು.

ನೂರಾರು ವೀರಕುಮಾರರು ಖಡ್ಗಹಿಡಿದು ನಗರದ ಎಲ್ಲ ಭಾಗಗಳಲ್ಲಿ ಸಂಚರಿಸುತಿದ್ದ ದೃಷ್ಯ ಎಲ್ಲರ ಗಮನ ಸೆಳೆಯಿತು. ಮಲ್ಲಿಗೆ ಹೂವಿನ ಕರಗ ವೀಸಲು ತಾಲೂಕು, ರಾಜ್ಯ, ದೇಶ&ವಿದೇಶಗಳಿಂದ ಲಾಂತರ ಭಕ್ತರು ನೆರೆದಿದ್ದರು. ಇಡೀ ರಾತ್ರಿ ಅಂಗಡಿಗಳು ತೆರೆದಿದ್ದು, ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರವಾಗಿದೆ.

ಬೆಳಗ್ಗೆ ನಗರದ 32ಕ್ಕೂ ಹೆಚ್ಚಿನ ದೇವಾಲಯಗಳಿಂದ ಅಲಂಕೃತಗೊಂಡ ವಿವಿಧ ಪಲ್ಲಕ್ಕಿಗಳ ಮುಂದೆ ಕರಗ ನೃತ್ಯ ಮಾಡಿದ ರೀತಿ ಅದ್ಭುತವಾಗಿತ್ತು. ಎಲ್ಲ ಪಲ್ಲಕ್ಕಿಗಳು ವಿಶೇಷವಾಗಿ ಹೂವು ಹಾಗೂ ದೀಪಾಲಂಕಾರದಿಂದ ಅಲಂಕೃತಗೊಂಡಿದ್ದವು. ನಗರದ ಎಲ್ಲ ಬೀದಿಗಳನ್ನು ಸಂಚರಿಸಿ ಪ್ರಮುಖರ ಮನೆಗಳ ಮುಂದೆ ನೃತ್ಯ ಮಾಡಿದ ಕರಗ ಬೆಳಗ್ಗೆ 11 ಗಂಟೆಗೆ ದೇವಾಲಯ ಸೇರುವ ಮೂಲಕ ಕರಗ ಸಂಪನ್ನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net