ಶ್ರೀ ದೊಡ್ಡಬಸವೇಶ್ವರ ಹುಂಡಿ ಹಣ ಎಣಿಕೆ

Kurugodu Money Counting
ಕುರುಗೋಡಿನ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಇಒ ಹನುಮಂತಪ್ಪ,ಪರಿವೀಕ್ಷಕ ಎಚ್.ಎಂ.ಭುವನೇಶ್ವರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಮುರಳೀಧರ್, ಮುಖ್ಯಪೇದೆ ಮಲ್ಲಯ್ಯ ಇದ್ದರು.
Published on

ಕುರುಗೋಡು: ಪಟ್ಟಣದ ಐತಿಹಾಸಿಕ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ಬುಧವಾರ ನಡೆದಿದ್ದು, ಒಟ್ಟು 22,48,791 ರೂ. ಸಂಗ್ರಹವಾಗಿದೆ. ಧಾರ್ಮಿಕ ದತ್ತಿ ಇಲಾಖೆ ಇಒ ಹನುಮಂತಪ್ಪ ನೇತೃತ್ವದಲ್ಲಿ ಹುಂಡಿ ಹಣ ಎಣಿಕೆ ಮಾಡಲಾಯಿತು.

2024ರ ಫೆ.13 ರಿಂದ 2024ರ ಜು.31ರವರೆಗೆ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು.

ಪ್ರಮುಖರಾದ ಚಾನಾಳು ಆನಂದ, ನಾಗಪ್ಪ, ಎಚ್. ಎಂ.ಶೇಖರಯ್ಯ ಸ್ವಾಮಿ, ಕುಂಬಾರು ದೊಡ್ಡಪ್ಪ, ದೇವಸ್ಥಾನದ ಸಹಾಯಕ ಬಿ.ಚಂದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net