ನಾಗರ ಹಾವು ಕಡಿದು ಮಗು ಸಾವು

paaVESH death
Published on

ಶ್ರೀರಂಗಪಟ್ಟಣ : ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಹಾವು ಕಡಿತಕ್ಕೆ ಒಳಗಾದ ನಾಲ್ಕು ವರ್ಷದ ಮಗುವೊಂದು ಚಿಕಿತ್ಸೆ ಫಲಿಸದೆ ದಾರುಣವಾಗಿ ಮೃತಪಟ್ಟಿದೆ. ಗ್ರಾಮದ ಮಣಿ ಅಣ್ಣಾ ಎಂಬುವರ ಪುತ್ರಿ ಗಾಯಿತ್ರಿ ತನ್ನ ತವರಿಗೆ 2ನೇ ಮಗುವಿನ ಬಾಣಂತನಕ್ಕೆ ತಮಿಳುನಾಡು ರಾಜ್ಯದಿಂದ ಬಂದಿದ್ದೂ, ತಾಯಿಯೊಂದಿಗೆ ಆಗಮಿಸಿದ್ದ ಮೊದಲನೇ ಪುತ್ರ ಪಾವೀಶ್ (4)ಮೃತ ಬಾಲಕ. ಮೃತ ಪಾವೀಶ್ ಗ್ರಾಮದ ತನ್ನ ಅಜ್ಜನ ಸಮೀಪದಲ್ಲೆ ಇರುವ ಕಿರುನಾಲೆ ಬಳಿ ಬರ್ಹಿದೆಸೆಗೆ ತೆರಳಿದ್ದು, ಈ ವೇಳೆ ಬೇಲಿಯಲ್ಲಿದ್ದ ವಿಷಪೂರಿತ ನಾಗರ ಹಾವು ಮಗುವಿನ ಕಾಲಿಗೆ ಕಡಿದಿದೆ. ವಿಷಯವನ್ನು ಮಗು ತನ್ನ ಪೋಷಕರಿಗೆ ತಿಳಿಸಿದ್ದು, ತಕ್ಷಣ ಮೈಸೂರಿನ ಅಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದಾರೆ. ಈ ವೇಳೆಗಾಗಲೇ ತೀವ್ರ ಅಸ್ವಸ್ಥಗೊಂಡಿದ್ದ ಬಾಲಕ ಉಸಿರು ಚೆಲ್ಲಿದ್ದಾನೆ. ಈ ಸಂಬಂಧ ಬಾಲಕನ ಪೋಷಕರು ನೀಡಿದ ದೂರಿನನ್ವಯ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net