ಶ್ರೀ ಚೌಡೇಶ್ವರಿ ಜಾತ್ರೋತ್ಸವ ವಿಜೃಂಭಣೆ

Dvd Jatre
ದೇವದುರ್ಗದಲ್ಲಿ ಚೌಡೇಶ್ವರಿ ದೇವಿ ಜಾತ್ರೆ ನಿಮಿತ್ತ ಮೂರ್ತಿ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಕಳಸಹಿಡಿದು ಭಾಗವಹಿಸಿದ್ದರು.
Published on

ದೇವದುರ್ಗ: ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀಮಾತಾ ಚೌಡೇಶ್ವರಿ ದೇವಿ ಜಾತ್ರೋತ್ಸವ ಸೋಮವಾರ ಶ್ರದ್ಧೆ ಭಕ್ತಿಯಿಂದ ಜರುಗಿತು.

ಬನದ ಹುಣ್ಣಿಮೆ ನಿಮಿತ್ತ ಬೆಳಗ್ಗೆ ರಾಮಲಿಂಗೇಶ್ವರ ಹಾಗೂ ಚೌಡೇಶ್ವರಿ ದೇವಿಗೆ ರುದ್ರಾಭಿಷೇಕ ಸೇರಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಗೋಸಿಮಠದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನದವರೆಗೆ ಚೌಡೇಶ್ವರಿ ದೇವಿ ಮೂರ್ತಿ ಮೆರವಣಿಗೆ ಮಾಡಲಾಯಿತು.

ಸಕಲ ವಾದ್ಯಮೇಳ, ಮಹಿಳೆಯರು ಕುಂಭ, ಕಳಸಹಿಡಿದು ಪಾಲ್ಗೊಂಡು ಮೆರವಣಿಗೆಗೆ ಮೆರುಗು ತಂದರು. ಭಕ್ತರಿಗೆ ಅನ್ನಸಂತರ್ಪಣೆ, ಸಂಜೆ ವಿವಿಧ ಕಲಾವಿದರಿಂದ ಸಂಗೀತ ಸೇವೆ, ಕಲಾವಿದ ಮಾಂತೇಶ್ ಹುಲ್ಲೂರ್ ತಂಡದಿಂದ ಹಾಸ್ಯ ಸಂಜೆ ಹಾಗೂ ನಂತರ ಅಹೋರಾತ್ರಿ ಭಜನೆ ಕಾರ್ಯಕ್ರಮ ನಡೆಯಿತು.

ನೇಕಾರ ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ ಕೊಂಗಿ, ಬಸವರಾಜ ಕಡಕಲ್, ಕೆ.ಈರಣ್ಣ, ಭೋಜರಾಜ ಮಿಣಜಿಗಿ, ಪ್ರಕಾಶ್ ನೀಲಿ, ಅಶೋಕ ಮುಂಡರಗಿ, ಶಿವರಾಜ ಅಕ್ಕಿಕಲ್, ಶಿವು ನೀಲಿ, ಶರಣು ಮಿಟ್ಟಿ, ಸಿಂದಗಿ ಬಸವ, ಚಟ್ಟಿ ಬಸವರಾಜ, ಶಂಕ್ರಮ್ಮ, ಮೀನಾಕ್ಷಿ, ಶಾಂತಮ್ಮ, ಜ್ಯೋತಿ ಆದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net