ಶ್ರೀಬೊಮ್ಮಲಿಂಗೇಶ್ವರ ಸ್ವಾಮಿಗೆ ಬೆಳ್ಳಿ ಕವಚಧಾರಣೆ

IMG_20250728_184918
ಶ್ರೀಬೊಮ್ಮಲಿಂಗೇಶ್ವರ ಸ್ವಾಮಿಗೆ ರಜತ (ಬೆಳ್ಳಿ) ಕವಚಧಾರಣೆ ಮಾಡಿರುವುದು.
Published on

ಅರಸೀಕೆರೆ: ಭಾರತೀಯ ಸನಾತನ ಸಂಸ್ಕೃತಿ, ಪರಂಪರೆ ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆ ಯುವ ಸಮುದಾಯದ ಮೇಲಿದೆ ಎಂದು ಮಾಡಾಳು ನಿರಂಜನಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಹೇಳಿದರು.

ತಾಲೂಕಿನ ಪನ್ನಸಮುದ್ರ ಗ್ರಾಮದ ಶ್ರೀಬೊಮ್ಮಲಿಂಗೇಶ್ವರ ಸ್ವಾಮಿಗೆ 40 ಕೆಜಿಯ ನೂತನ ರಜತ (ಬೆಳ್ಳಿ) ಕವಚಧಾರಣೆ ಮತ್ತು ಸಿದ್ಧೇಶ್ವರ ಸ್ವಾಮಿಗೆ ಬೆಳ್ಳಿಯ ಪ್ರಭಾವಳಿ, ಬೆತ್ತದ ಪಲ್ಲಕ್ಕಿ ಸೇವೆಯ ನೂತನ ಪೀಠ ಲೋಕಾರ್ಪಣೆ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಭಗವಂತನ ಕೃಪೆಯಿಂದ ಜನರು ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗಿದೆ. ದೇಗುಲ ಲೋಕಾರ್ಪಣೆ, ಬೆಳ್ಳಿ ಕವಚ ಧಾರಣೆ ಒಳಗೊಂಡಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಧಾರ್ಮಿಕ ಆಚರಣೆ ಭಕ್ತರನ್ನು ಒಂದೆಡೆ ಸೇರಿಸುವುದರಿಂದ ಸಾಮಾಜಿಕ ಸಾಮರಸ್ಯ ಬೆಳೆಸಲು ನೆರವಾಗಲಿದೆ. ಒಳ್ಳೆಯ ಜೀವನ ನಡೆಸಲು ದೇವರು ಧರ್ಮ ಮುಖ್ಯ ಎಂದು ತಿಳಿಸಿದರು.

ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ದೇವರು, ಗುರುಗಳು ಮಠಮಾನ್ಯಗಳ ಬಗ್ಗೆ ಭಕ್ತಿ ಬೆಳೆಸಿಕೊಂಡಲ್ಲಿ ಜೀವನ ಸಾರ್ಥಕವಾಗಲಿದೆ ಎಂದು ಹೇಳಿದರು.

ಶಾಸಕ ಶಿವಲಿಂಗೇಗೌಡ ಮಾತನಾಡಿ, ಗ್ರಾಮಸ್ಥರು ಒಗ್ಗೂಡಿ ದೇವರಿಗೆ ಬೆಳ್ಳಿಯ ಕವಚಧಾರಣೆ ಮಾಡಿಸಿ ಭಕ್ತಿ ಸಮರ್ಪಣೆ ಮಾಡಿದ್ದಾರೆ. ದೇವರ ಬಗ್ಗೆ ಭಕ್ತಿ, ಧಾರ್ಮಿಕ ಮನೋಭಾವನೆ ಬೆಳೆಸಿಕೊಳ್ಳೋಣ ಎಂದು ತಿಳಿಸಿದರು.

ದೇವಸ್ಥಾನದ ಧರ್ಮದರ್ಶಿ ಬೊಮ್ಮಣ್ಣ, ಸೋಮಶೇಖರಪ್ಪ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಜಯಣ್ಣ, ಮುಖಂಡರಾದ ಮಲ್ಲಿಕಾರ್ಜುನ್, ಮಹೇಶಣ್ಣ, ಕುಮಾರ್, ಶ್ರೀಧರ್, ಚರಣ್, ರಾಜೇಶ್, ನಾಗರಾಜ್ ಶಶಿಧರ್, ಪರಮೇಶ್, ದೇವರಾಜ್, ರವಿ, ರಾಕೇಶ್, ನಟರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net