ಜೀರ್ಣೋದ್ಧಾರದ ಹಾದಿಯಲ್ಲಿ ಶ್ರೀಭುವನೇಶ್ವರಿ ದೇವಳ

sid
Published on

ವಿಜಯವಾಣಿ ಸುದ್ದಿಜಾಲ ಗೋಳಿಯಂಗಡಿ

ವಂಡಾರು ಶ್ರೀಭುವನೇಶ್ವರಿ ದೇವಸ್ಥಾನ ಟ್ರಸ್ಟ್ ಹಾಗೂ ಊರ ಪರವೂರ ಭಕ್ತಾದಿಗಳ ಸಹಕಾರದಲ್ಲಿ ವಂಡಾರು ಶ್ರೀಭುವನೇಶ್ವರಿ ದೇವಳವು ಅಂದಾಜು 3 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಗಳೊಂದಿಗೆ ಹೊಸ ಮೆರುಗು ಪಡೆಯಲಿದೆ.

ಪ್ರಸ್ತುತ ಈ ಸಾನಿಧ್ಯ ಶಿಥಿಲಾವಸ್ಥೆಯಲ್ಲಿದ್ದು, ಮುಂದಿನ ಕಾಯಕಲ್ಪಕ್ಕಾಗಿ 2024ರ ನವೆಂಬರ್‌ನಲ್ಲಿ ಗ್ರಾಮಸ್ಥರು, ಗಣ್ಯರ ಉಪಸ್ಥಿತಿಯಲ್ಲಿ ಸಭೆ ನಡೆಸಿ ದೇವಳದ ಮುಂದಿನ ಜೀರ್ಣೋದ್ಧಾರ ಕಾರ್ಯದ ಬಗ್ಗೆ ನಿರ್ಣಯಿಸಲಾಗಿದೆ.

ದೇವಳವು ನೂತನ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ, ಸುತ್ತು ಪೌಳಿ, ಕಲ್ಲು ಚಪ್ಪಡಿ ಹಾಸುವಿಕೆ, ದೇವಳದ ಎದುರಿನ ತಗ್ಗು ಪ್ರದೇಶವನ್ನು ಮಣ್ಣು ತುಂಬಿಸಿ ಸಮತಟ್ಟುಗೊಳಿಸಿ ತಡೆಗೋಡೆ ನಿರ್ವಾಣ, ಬಾವಿ ದುರಸ್ಥಿ, ಇಂಟರ್‌ಲಾಕ್ ಅಳವಡಿಕೆ ಸೇರಿದಂತೆ ಇನ್ನಿತರ ಕಾರ್ಯಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net