ಶ್ರೀ ಭಾಗ್ಯವಂತಿ ದೇವಿ ರಥೋತ್ಸವ ಅದ್ದೂರಿ

ಅರಕೇರಾ ತಾಲೂಕಿನ ಮಲ್ಲಿನಾಯಕನದೊಡ್ಡಿ ಗ್ರಾಮದಲ್ಲಿ ಶ್ರೀ ಭಾಗ್ಯವಂತಿ ದೇವಿ ಜಾತ್ರೋತ್ಸವ ನಿಮಿತ್ತ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಅರಕೇರಾ ತಾಲೂಕಿನ ಮಲ್ಲಿನಾಯಕನದೊಡ್ಡಿ ಗ್ರಾಮದಲ್ಲಿ ಶ್ರೀ ಭಾಗ್ಯವಂತಿ ದೇವಿ ಜಾತ್ರೋತ್ಸವ ನಿಮಿತ್ತ ರಥೋತ್ಸವ ಅದ್ದೂರಿಯಾಗಿ ಜರುಗಿತು.
Published on

ಅರಕೇರಾ: ತಾಲೂಕಿನ ಮಲ್ಲಿನಾಯಕನದೊಡ್ಡಿ ಗ್ರಾಮದಲ್ಲಿ ಶೀಗಿ ಹುಣ್ಣಿಮೆ ನಿಮಿತ್ತ ಶ್ರೀ ಭಾಗ್ಯವಂತಿ ದೇವಿ ಜಾತ್ರೋತ್ಸವ ಸೋಮವಾರ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ ದೇವಿ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿದವು. ಭಕ್ತರು ಕಾಯಿ, ಕರ್ಪೂರ, ನೈವೆದ್ಯ ಸಲ್ಲಿಸಿದರು. ದೇವಸ್ಥಾನವನ್ನು ಹೂವಿಗಳಿಂದ ಅಲಂಕಾರ ಮಾಡಲಾಗಿತ್ತು. ಮಹಿಳೆಯರ ಕಳಸ, ಡೊಳ್ಳು ಹಾಗೂ ವಿವಿಧ ಜನಪದ ವಾದ್ಯಮೇಳದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು. ನಂತರ ಅನ್ನಸಂತರ್ಪಣೆ ಮಾಡಲಾಯಿತು. ಸುತ್ತಲಿನ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net