ಹರ್ತಿ ಬಸವೇಶ್ವರ ಜಾತ್ರೋತ್ಸವ

11 MUL
Published on

ಮುಳಗುಂದ: ಸಮೀಪದ ಹರ್ತಿ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಸೋಮವಾರ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆ 7ಗಂಟೆಗೆ ಬಸವಣ್ಣ ದೇವರಿಗೆ ಅಭಿಷೇಕ ಹಾಗೂ ಅರ್ಚನೆ ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ದರ್ಶನ ಹಾಗೂ ಸೇವಾ ಕಾರ್ಯ, ವೀರಭದ್ರ ದೇವರ ಅಗ್ನಿಪ್ರವೇಶ ಕಾರ್ಯಕ್ರಮಗಳು ಜರುಗಿದವು. ಗ್ರಾಮದೇವತೆಗೆ ಉಡಿ ತುಂಬುವ ಹಾಗೂ ಕಾಯಿಕರ್ಪೂರದ ಸೇವಾಕಾರ್ಯ ಭಜನೆ, ಕರಡಿ ಮಜಲಿನ ಮೇಳಗಳು ಗಮನ ಸೆಳೆದವು.

ಸಂಜೆ 5ಗಂಟೆಗೆ ಬಸವಣ್ಣ ದೇವರ ಮಹಾರಥೋತ್ಸವವು ನಂದಿಧ್ವಜ ಪಲ್ಲಕ್ಕಿಯ ಮೆರವಣಿಗೆಯೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net