ಮೆಣಸಗಿ ಬಸವೇಶ್ವರ ರಥೋತ್ಸವ

MENASAGI
Published on

ಮೆಣಸಗಿ: ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ರಥೋತ್ಸವ ಜರುಗಿತು. ಗ್ರಾಮದ ಮಲ್ಲಪ್ಪ ಬೆಳವಣಕಿ, ಈಶ್ವರಪ್ಪ ಕಳ್ಳಿಮನಿ, ವಾಸಪ್ಪ ತೋಟರ, ಗ್ರಾಪಂ ಅಧ್ಯಕ್ಷ ಈಶ್ವರ ಮುದೇನೂರು ಹಾಗೂ ಗ್ರಾಮದ ಸಕಲ ಸದ್ಭಕ್ತರಿಂದ ಬೆಳಗ್ಗೆ 6ಗಂಟೆಗೆ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಜಾತ್ರಾ ಮಹೋತ್ಸವದಲ್ಲಿ ಶ್ರೀ ಫಲಹಾರೇಶ್ವರ ಭಜನಾ ಮಂಡಳಿ, ಶ್ರೀ ಲಿಂಗಬಸವೇಶ್ವರ ಭಜನಾ ಮಂಡಳಿ, ಶ್ರೀ ಬೀರಲಿಂಗೇಶ್ವರ ಭಜನಾ ಮಂಡಳಿಯ ಮೇಳಗಳು ಗಮನ ಸೆಳೆದವು. ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net