ಬಸವಾದಿ ಶರಣರ ವಚನಗಳ ಸಾರ ತಿಳಿಯಿರಿ

30112022 yelburga vachana chintana gosti
Published on

ಯಲಬುರ್ಗಾ: ಸಮ ಸಮಾಜದ ಚಿಂತನೆಯುಳ್ಳ ಬಸವಣ್ಣನವರ ವಚನಗಳು ಮಾನವ ಕುಲಕ್ಕೆ ದಾರಿದೀಪವಾಗಿವೆ ಎಂದು ಶಿರೂರು ಮಠದ ಮಹಾಂತತೀರ್ಥ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಮರಕಟ್ ಗ್ರಾಮದ ಶಿವಾನಂದ ಮಠದಲ್ಲಿ ಬಸವಕೇಂದ್ರದಿಂದ ಸೋಮವಾರ ಹಮ್ಮಿಕೊಂಡಿದ್ದ ವಚನ ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದರು.

ಪ್ರತಿಯೊಬ್ಬರೂ ಬಸವಾದಿ ಶರಣರ ವಚನಗಳ ಸಾರ ಅರಿಯಬೇಕು. ಜಾತಿ ಪದ್ಧತಿ, ಮೌಢ್ಯ ಆಚರಣೆ ವಿರುದ್ಧ ತಮ್ಮ ವಚನಗಳ ಮೂಲಕ ಕ್ರಾಂತಿ ನಡೆಸಿದ ಮಹಾತ್ಮರ ಆದರ್ಶ ಎಲ್ಲರೂ ಪಾಲಿಸಬೇಕು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ತಾಯಂದಿರು ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು ಎಂದರು.

ಬಸವಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ, ಪ್ರಮುಖರಾದ ಅಶೋಕ ಬರಗುಂಡಿ, ಸಿಂಧನೂರಿನ ವೀರಭದ್ರಪ್ಪ ಅಣ್ಣನವರು, ಬಸವರಾಜ ಇಂಗಳದಾಳ, ಅಮರೇಶಪ್ಪ ಗಡಿಹಳ್ಳಿ ಮುಖಂಡರಾದ ಹನುಮಂತಪ್ಪ ಗದ್ದಿ, ಹನುಮಗೌಡ ಬಳ್ಳಾರಿ, ಹನುಮಂತಪ್ಪ ಹುಣಸಿಹಾಳ, ನಾಗನಗೌಡ ಜಾಲಿಹಾಳ, ಪಾಲಾಕ್ಷಪ್ಪ ಹುಣಸಿಹಾಳ, ಬಸಲಿಂಗಪ್ಪ ಗಜೇಂದ್ರಗಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net